ಕೊಪ್ಪಳ: PDO ಸಸ್ಪೇಂಡ್
ನರೇಗಾ ಅವ್ಯವಹಾರ ಸಾಬೀತು
ತುಂಗಾವಾಣಿ
ಗಂಗಾವತಿ ನ 20 ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಣಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನೀಲಾಸೂರ್ಯಕುಮಾರಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಾಲೆಗಳ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಗ್ರಾಮಸ್ತ ರಾಜೇಶ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು, ದೂರನ್ನು ಪರಿಶೀಲಿಸಿ ಸೂಕ್ತ ಲಿಖಿತ ಸಮಜಾಯಿಷಿ ನೀಡಲು PDO ನೀಲಾ ಸೂರ್ಯಕುಮಾರಿ ಗೆ ಷೊಕಾಸ್ ನೋಟಿಸ್ ನೀಡಲಾಗಿತ್ತು ಆದರೆ ಪಿಡಿಒ ಯಾವುದೇ ಸಮಜಾಯಿಷಿ ನೀಡದಿರುವುದರಿಂದ ಹಾಗು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ನಿರ್ವಹಣೆಯಲ್ಲಿ ನ್ಯೂನತೆಗಳು ಇಲಾಖಾ ತನಿಖೆಯಲ್ಲಿ ಕಂಡು ಬಂದಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.