ಹೆಂಡತಿಯಿಂದಲೇ ಗಂಡನಿಗೆ ಜಾತಿ ನಿಂದನೆ ಕೇಸ್ ದಾಖಲು.!
ತುಂಗಾವಾಣಿ.
ಗಂಗಾವತಿ:ನ-19 ನಗರದ ಪ್ರತಿಷ್ಠಿತ ಶಾಲೆಯ ಶಿಕ್ಷಕನ ಹೆಂಡತಿ ಜಾತಿನಿಂದನೆ ದೂರು ದಾಖಲಿಸಿ ಅಚ್ಚರಿ ಮೂಡಿಸಿದ್ದಾರೆ.
ಗಂಗಾವತಿ ನಗರದ ಬೇತಲ್ ಸ್ಕೂಲ್ ಮಾಲೀಕರಾದ ಹೇಮಕುಮಾರಿಯವರ ಪುತ್ರ ಬಾಬೇಜ್ ಮಿಲ್ಟನ್ ಎಂಬುವವರು ದೂರದ ಮೈಸೂರಿನ ದಿವ್ಯಶ್ರೀ ಎಂಬುವವರನ್ನು ಪ್ರೀತಿಸಿ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು ಅವರಿಗೆ ಒಂದು ಗಂಡು ಮಗು ಸಹ ಇದೆ. ಈಗ ನನ್ನ ಪತಿ ಜಾತಿಯಿಂದ ನಿಂದನೆ ಮಾಡಿದ್ದಾರೆ ಮತ್ತು ತವರುಮನೆಯಿಂದ ಹಣ ತರಲು ಹೇಳಿ ಕಿರುಕುಳ ಕೊಡುತ್ತಿದ್ದಾರೆ ಎಂದು ಪತಿ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪತ್ನಿ ದಿವ್ಯಶ್ರೀ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.