ಗಂಗಾವತಿ: ಫೆಡ್ ಬ್ಯಾಂಕ್ ದೋಖ.!
ಗ್ರಾಹಕ ಕಂಗಾಲು.
ತುಂಗಾವಾಣಿ.
ಗಂಗಾವತಿ: ಅ-26 ನಗರದ ಪ್ರತಿಷ್ಠಿತ ಬ್ಯಾಂಕ್‌ಕೊಂದು ಗ್ರಾಹಕರಿಗೆ ದೋಖ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಗಾವತಿ ನಗರದ ಗಾಂಧಿ ವೃತ್ತದ ಬಳಿ ಬರುವ ಫೆಡ್ ಬ್ಯಾಂಕ್. ಗ್ರಾಹಕರ ಬಂಗಾರದ ಆಭರಣ (ವತ್ತಿ) ಅಡಮಾನ. ಇಟ್ಟುಕೊಂಡು ಸಾಲ ಕೊಡುವುದರ ಜೊತೆಗೆ ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗ ಬೇಕಿದ್ದ ಬ್ಯಾಂಕ್. ಇಂದು ಗ್ರಾಹಕರು ಅಲೆದಾಡುವ ಪ್ರಸಂಗ ನಡೆದಿದೆ.
ಫೆಡ್ ಬ್ಯಾಂಕ್ ಮ್ಯಾನೇಜರ್ ಮೂಲತಃ ಕೊಪ್ಪಳ ಜಿಲ್ಲೆಯ ಜಿನ್ನಾಪುರ ಗ್ರಾಮದ ಯಲ್ಲಪ್ಪ ಮತ್ತು CSE ಸಂಗಪ್ಪ ಹಿರೇ ಮನ್ನಾಪುರ. ಈ ಇಬ್ಬರು ಖತರ್ನಾಕ ಕದಿಮರ ಕೈಗೆ ಸಿಕ್ಕ ಬ್ಯಾಂಕ್. ದಿವಾಳಿ ಎಬ್ಬಿಸಿದ್ದಾರೆ.
ಅಷ್ಟಕ್ಕೂ ಬ್ಯಾಂಕ್ ನಲ್ಲಿ ನಡೆದಿರುವುದಾದರೂ ಏನು ಅಂತಿರಾ.?
ಗ್ರಾಹಕರು ತಮ್ಮ ತಮ್ಮ ಕಷ್ಟದ ಕಾಲಕ್ಕೆ ಬಂಗಾರ ಅಡಮಾನ ಇಟ್ಟು ಸಾಲ ತಗೆದು ಕೊಂಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಮ್ಯಾನೇಜರ್ ಮತ್ತು CSE ಇಬ್ಬರು ಸೇರಿ ಗ್ರಾಹಕರ ಬಂಗಾರವನ್ನು ಅಡಮಾನ (ವತ್ತಿ) ಇಟ್ಟು ಹೋದ ತಕ್ಷಣ. ಅವರಂತೆ ನಕಲು ಸಹಿ ಮಾಡಿ ಅದೇ ಬಂಗಾರದ ಮೇಲೆ ಹೆಚ್ಚುವರಿ ಸಾಲ ತಗೆದುಕೊಂಡು ಹಲವಾರು ಜನರಿಗೆ ಪಂಗನಾಮ ಹಾಕಿದ್ದಾರೆ.
ಗ್ರಾಹಕರು ತಮ್ಮ ಬಂಗಾರದ ಆಭರಣಗಳನ್ನು ಬಿಡಿಸಿಕೊಳ್ಳಲು ಬಂದಾಗ ಬೆಳಕಿಗೆ ಬಂದಿದೆ.
ಇಬ್ಬರ ಮೇಲೆ ದೂರು ದಾಖಲು.!
ಫೆಡ್ ಬ್ಯಾಂಕ್ ಮೇನ್ ಬ್ರಾಂಚ್‌ಗೆ ಮಾಹಿತಿ ರವಾನೆಯಾದಾಗ. ಮೇಲಾಧಿಕಾರಿಗಳು ಅವರ ಮೇಲೆ ದೂರು ಸಹ ದಾಖಲಿಸಿದ್ದಾರೆ.
ಆದರೆ ಅಡಮಾನ ಇಟ್ಟ ಗ್ರಾಹಕನಿಗೆ ಇನ್ನೂ ಅವರ ಆಭರಣ ಹಿಂತಿರುಗಿಸಿಲ್ಲ. ಅದರಿಂದ ನೊಂದ ಗ್ರಾಹಕರು. ಫೆಡ್ ಬ್ಯಾಂಕ್ ಬಾಗಿಲು ಹಾಕಿ ಪ್ರತಿಭಟನೆ ಮಾಡಿ ನಮ್ಮ ಅಡಮಾನದ ಮೊತ್ತ ಸ್ವೀಕರಿಸಿ ನಮ್ಮ ಆಭರಣ ಕೊಡಿ ಎಂದು ಅಳಲನ್ನು ತೊಡಿಕೊಂಡ ಪ್ರಸಂಗ ನಡೆಯಿತು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.