ಜಿಲ್ಲೆಯಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು !?

ಜಿಲ್ಲೆಯಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು !?

ತುಂಗಾವಾಣಿ
ಗಂಗಾವತಿ ನ-17 ಕೊಲೆಯತ್ನ ದಂತಹ ಗಂಭೀರ ಅಪರಾದ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಯು ಗಂಗಾವತಿ ಪೋಲಿಸ್ ಠಾಣೆ ಆವರಣದಲ್ಲಿ ರಾಜಾರೋಷವಾಗಿ ಬಂದು ಹೋಗಿರುವ ಘಟನೆ ತಡವಾಗಿ ತಿಳಿದುಬಂದಿದೆ.

ಕಳೆದ ತಿಂಗಳು ಇದೇ ಆರೋಪಿಯನ್ನು ಬಂದಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಶಿವರಾಜ ತಂಗಡಗಿ ಜೊತೆ ಹತ್ತಾರು ಮುಖಂಡರು ಹಾಗು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗಂಗಾವತಿ ಪೋಲಿಸ್ ಠಾಣೆಯಲ್ಲಿ ತಡ ರಾತ್ರಿಯವರೆಗೆ ಧರಣಿ ಕುಳಿತಿದ್ದಲ್ಲದೇ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಿಂದ ಪೋಲಿಸ್ ಠಾಣೆಯ ವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿ ಒತ್ತಾಯಿಸಿದ್ದರು.

ಪ್ರಕರಣ ದಾಖಲಾಗಿ ಒಂದುವರೆ ತಿಂಗಳು ಕಳೆದರೂ ಆರೋಪಿಯನ್ನು ಹುಡುಕುತ್ತಿರುವ ಪೋಲಿಸರಿಗೆ ಠಾಣೆಯ ಆವರಣದಲ್ಲಿ ಆರೋಪಿ ಬಂದು ತಾಸುಗಟ್ಟಲೆ ಇದ್ದದ್ದು ಕಂಡು ಬರದಿರುವುದು ತಾಲೂಕಿನ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.

ಅಕ್ಟೋಬರ್ 4 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ವಿ ಪ್ರಸಾದ ಹಾಗು ಮುರಳಿಕೃಷ್ಣ ಎಂಬುವವರಲ್ಲಿ ಕಲಹ ಏರ್ಪಟ್ಟು ಮುರಳಿಕೃಷ್ಣ ಎನ್ನುವ ವ್ಯಕ್ತಿಯು ವಿ ಪ್ರಸಾದ್ ಎಂಬ ವ್ಯಕ್ತಿಯ ಮೇಲೆ ಟ್ರಾಕ್ಟರ್ ಹತ್ತಿಸಿ ಗಂಭಿರ ಗಾಯಗೊಳಿಸಿದ್ದನು ಈ ಸಂಬಂದ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಯತ್ನದ ಕಲಂ ಅನ್ವಯ ಆರೋಪಿ ಮುರಳಿಕೃಷ್ಣ ನ ಮೇಲೆ ಪ್ರಕರಣ ದಾಖಲಾಗಿತ್ತು ಆರೋಪಿತನ್ನು ಬಂದಿಸ ಬೇಕೆಂದು ಒತ್ತಾಯಿಸಿ ಠಾಣೆಯ ಆವರಣದಲ್ಲಿ ಧರಣಿ ಮತ್ತು ಗ್ರಾಮದಿಂದ ಬೃಹತ್ ಪಾದಯಾತ್ರೆ ಮಾಡಲಾಗಿತ್ತು ಆದರೂ ಇಲ್ಲಿಯವರೆಗೂ ಆರೋಪಿಯ ಬಂದನವಾಗಿಲ್ಲ ಆದರೆ ನಿನ್ನೆ ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಠಾಣೆಯಲ್ಲಿ ರಾಜಿ ಪಂಚಾಯತಿ ಮಾಡಿಕೊಳ್ಳಲು ಗ್ರಾಮದ ಹತ್ತಾರು ಜನರ ಜೊತೆ ಕೊಲೆ ಯತ್ನದ ಆರೋಪ ಹೊತ್ತಿರುವ ಆರೋಪಿ ಮುರಳಿಕೃಷ್ಣ ಠಾಣೆಯ ಆವರಣದಲ್ಲೆ ಗಂಟೆಗಟ್ಟಲೆ ಠಿಕಾಣಿ ಹೂಡಿ ಆವರಣದಲ್ಲಿ ತಿರುಗಾಡಿರುವ ವಿಡಿಯೋ ತುಣುಕು ತುಂಗಾವಾಣಿಗೆ ಲಭ್ಯವಾಗಿದೆ,

ಸಣ್ಣ ಪುಟ್ಟ ಜಗಳಗಳಲ್ಲಿ ಭಾಗಿಯಾದ ಆರೋಪಿತರನ್ನು ಎಲ್ಲಿದ್ದರೂ ಸದೆಬಡೆದು ಜೈಲಿಗಟ್ಟುವ ಜಿಲ್ಲೆಯ ಪೋಲಿಸರಿಗೆ ಕೊಲೆ ಯತ್ನದಂತಹ ಗಂಭೀರ ಆರೋಪವಿರುವ ಆರೋಪಿಯು ನ್ಯಾಯಾಲಯದಿಂದ ಜಾಮೀನನ್ನು ಪಡೆಯದೇ ? ಠಾಣೆಯ ಆವರಣದಲ್ಲಿ ರಾಜಾರೋಷವಾಗಿ ಕಾಲ ಕಳೆದದ್ದು ಕಾಣದಾಯಿತೇ ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಆರೋಪಿಯನ್ನು ಬಂಧಿಸುವವರೆಗೋ ಸ್ಥಳಬಿಟ್ಟು ಕದಲುವುದಿಲ್ಲ ವೆಂದಿದ್ದ ಮಾಜಿ ಸಚಿವ ತಂಗಡಗಿ ಸುಮ್ಮನಾಗಿದ್ದೇಕೆ ?
ಆರೋಪಿಯನ್ನು ಬಂಧಿಸದಿರಲು ಪೋಲಿಸರಿಗೆ ಯಾರ ಒತ್ತಡವಿದೆ ? ಎಂಬ ಉತ್ತರ ಸಿಗಬೇಕಿದೆ.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.!

ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.! ತುಂಗಾವಾಣಿ. ಕೊಪ್ಪಳ: ಜುಲೈ-31 …

error: Content is protected !!