ಜೂಜು ಅಡ್ಡೆ ಮೇಲೆ ದಾಳಿ: 13 ಜನರ ವಶಕ್ಕೆ.!
ತುಂಗಾವಾಣಿ.
ಗಂಗಾವತಿ: ಅ-29 ತಾಲೂಕಿನ ಡಣಾಪುರ – ಮಜ್ಜಿಗಿಕ್ಯಾಂಪ್ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ವಶಕ್ಕೆ ಪಡೆದ ಘಟನೆ ನಿನ್ನೆ ಸಂಜೆ ನಡೆದಿದೆ.
ಹಯಾತ್‌ಪೀರ ಹೆಬ್ಬಾಳ ಮತ್ತು ಹನುಮೇಶ ಕೋಟೆ ಇಬ್ಬರ ಪಂಚರೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ. ಉದಯರವಿ ಯವರು ಒಟ್ಟು ಹದಿಮೂರು ಜನರನ್ನು ವಶಕ್ಕೆ ಪಡೆದು ಇಸ್ಪೀಟು ಆಟದಲ್ಲಿ ಸಿಕ್ಕ ₹34 ಸಾವಿರ ರೂಪಾಯಿ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಡಣಾಪುರ ಗ್ರಾಮದ ರಾಮು. ಶಶಿಕುಮಾರ ರಾಠೋಡ.ಅಂಬರೀಶ್. ವೆಂಕಟೇಶ ಬಾಳಾಪೂರ. ಅನೀಲಕುಮಾರ ಈಡಿಗೇರ. ಶ್ರೀನಿವಾಸ ಕೃಷ್ಣ ಮೂರ್ತಿ. ಸಿದ್ದಪ್ಪ ಪೂಜಾರ. ಭೀರಪ್ಪ ಕಿಡದಾಳ. ರಾಮಣ್ಣ ಡಂಬರ. ಹನುಮಂತ ಕೊರವರ. ಬೂದಗುಂಪ ಹನುಮೇಶ.ಕಾಂತಗೌಡ ಪಂಪನಗೌಡ. ಮರಿಯಪ್ಪ. ಎಂಬುವವರು ಕಾನೂನು ಬಾಹಿರ ವಾದ ಜೂಜಾಟದಲ್ಲಿ ತೊಡಗಿದ್ದರು. ಪಂಚರ ಸಮ್ಮುಖದಲ್ಲಿ ಹಣ ಮತ್ತು ಇಸ್ಪೀಟೆಲೆಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.