ಆಟೋ ಪಲ್ಟಿ
ಮಹಿಳೆ ಸಾವು.
ತುಂಗಾವಾಣಿ.
ಗಂಗಾವತಿ: ನ-1 ತಾಲೂಕಿನ ಜಂಗಮರ ಕಲ್ಗುಡಿ ಹತ್ತಿರ ಆಟೋ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ಗಂಗಾವತಿ ನಗರದ ವಿರುಪಾಪುರ ತಾಂಡ ಕವಡಿಮಟ್ಟಿ ಕ್ಯಾಂಪ್ ನಿವಾಸಿ ಅಕ್ತರ್ ಬಾನು ಹುಸೇನ್ ಸಾಬ (40) ಎಂಬುವವರು ದಿನ ನಿತ್ಯದಂತೆ ತರಕಾರಿ ಮತ್ತು ಮಂಡಾಳ ವ್ಯಾಪಾರ ಮಾಡಲು ಗುಂಡುರೂ ಗ್ರಾಮದ ಭಾಗಕ್ಕೆ ಹೋಗಿ ವ್ಯಾಪಾರ ಮಾಡಿಕೊಂಡು ವಾಪಸ್ಸು ಬರುತ್ತಿರುವಾಗ ಜಂಗಮರ ಕಲ್ಗುಡಿ ಸಮೀಪ ಆಟೋ ಪಲ್ಟಿಯಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತಳಿಗೆ ನಾಲ್ಕು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಿವೆ.
ಆಟೋ ಚಾಲಕ ಪರಾರಿಯಾಗಿದ್ದು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪತಿ ಹುಸೇನ್‌ಬಾಷಾ ಮಂಡಲಗೇರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಆಟೋ ಚಾಲಕ ಪರಾರಿಯಾಗಿದ್ದು
ಪೊಲೀಸರು ಪಲ್ಟಿಯಾದ ಆಟೋವನ್ನು ತಮ್ಮ ವಾಹನಕ್ಕೆ ಹಗ್ಗ ಕಟ್ಟಿ ತೆಗೆದುಕೊಂಡು ಠಾಣೆಗೆ ತಂದ ಘಟನೆ ನಡೆದಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.