ಹೆಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೇಯಾದ್ರಾ..!?
ತುಂಗಾವಾಣಿ
ಗಂಗಾವತಿ ನ 30 ಇಂದು ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೆಚ್ ಆರ್ ಶ್ರೀನಾಥ ರವರ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಪೋಟೊಗಳು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ.
ಜೆಡಿಎಸ್ ಪಕ್ಷದ ಹೈದ್ರಾಬಾದ ಕರ್ನಾಟಕ ಉಸ್ತುವಾರಿ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ ಅವರು ಬಳ್ಳಾರಿ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಸಿ ಕೊಂಡಯ್ಯ ಅವರ ಪರವಾಗಿ ಕಾಂಗ್ರೆಸ್ ಶಾಲು ಹಾಕಿಕೊಂಡು ಅಪಾರ ಬೆಂಬಲಿಗರ ಜೊತೆ ಮತ ಪ್ರಚಾರದಲ್ಲಿ ತೊಡಗಿರುವುದು ಪೋಟೊಗಳು ಹರಿದಾಡಿದ್ದವು ಈ ಬಗ್ಗೆ ತುಂಗಾವಾಣಿಗೆ ಬಂದ ಮಾಹಿತಿಯ ಪ್ರಕಾರ ಬಳ್ಳಾರಿ ವಿಧಾನ ಪರೀಷತ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಹಾಕದಿರುವ ಕಾರಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆಸಿ ಕೊಂಡಯ್ಯ ಅವರು ಮಾಜಿ ಸಂಸದ ಹೆಚ್ ಜಿ ರಾಮುಲು ಅವರ ಆಪ್ತರಾಗಿ ಗುರ್ತಿಸಿಕೊಂಡಿದ್ದು ಗಂಗಾವತಿಯ ನಿವಾಸಕ್ಕೆ ಬಂದು ತಮ್ಮ ಪರವಾಗಿ ಪ್ರಚಾರ ಸಭೆಗೆ ಬರಲು ಆಹ್ವಾನಿಸಿದ್ದರಿಂದ ಪಕ್ಕದ ಕಂಪ್ಲಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಅವರ ಪರವಾಗಿ ಮತಯಾಚಿಸಿದ್ದು ಮುಂದೆ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಮ್ ಅಹ್ಮದ್ ಅವರ ಪರವಾಗಿಯೂ ಪ್ರಚಾರ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿದು ಬಂದಿದೆ.
ಕೊಪ್ಪಳ ರಾಯಚೂರು ಕ್ಷೇತ್ರದಲ್ಲಿಯೂ ಕೂಡ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿಲ್ಲ ಆದರೆ ಇಲ್ಲಿನ ಕೈ ಅಭ್ಯರ್ಥಿಯು ತಮ್ಮ ಪರವಾಗಿ ಪ್ರಚಾರ ಮಾಡಲು ಆಹ್ವಾನ ನೀಡದಿರುವುದರಿಂದ ಗಂಗಾವತಿ ಭಾಗದಲ್ಲಿ ಪ್ರಚಾರ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ ಹಾಗು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಹೆಚ್ ಆರ್ ಶ್ರೀನಾಥ ಅವರಿಗೆ ಕಾಂಗ್ರೆಸ್ ಪಕ್ಷ ಕ್ಕೆ ಮರಳಿ ಬರಲು ಆಹ್ವಾನ ನೀಡಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯ ಕಾರ್ಯಕರ್ತರ ಜೊತೆ ಚರ್ಚಿಸಿ ತಿರ್ಮಾನಿಸಲಾಗುತ್ತದೆ ಎಂಬ ಮಾಹಿತಿಯನ್ನು ಹೆಚ್ ಆರ್ ಶ್ರೀನಾಥ ಅವರ ಬೆಂಬಲಿಗ ಹಾಗು ನಗರಸಭೆ ಸದಸ್ಯ ಮಹ್ಮದ್ ಉಸ್ಮಾನ ತಿಳಿಸಿದ್ದಾರೆ.
ಅಂದುಕೊಂಡಂತೆ ನಡೆದು ಹೆಚ್ ಆರ್ ಶ್ರೀನಾಥ ಕಾಂಗ್ರೆಸ್ ಸೇರ್ಪಡೆಯಾದರೆ ?
ಕಾಂಗ್ರೆಸ್ ಪಕ್ಷದ ಚಿನ್ಹೆಯಲ್ಲಿ ನಿಂತು ಸೋತು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಪಡಿಸಲು ಸೆಣಸಾಡುತ್ತಿರುವ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಸಿಗುತ್ತಾ ? ಅಥವಾ ಇಂದಿರಾ ಗಾಂಧಿ ಇಂದ ಹಿಡಿದು ಸೋನಿಯಾ ಗಾಂಧಿಯ ವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠೆಯಲ್ಲಿರುವ ಹೆಚ್ ಜಿ ರಾಮುಲು ಅವರ ಮನೆಗೆ ಕೈ ಟಿಕೇಟು ಹೊಗುತ್ತಾ ಕಾದು ನೋಡ ಬೇಕಿದೆ.?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.