ಐದು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ.!
ತುಂಗಾವಾಣಿ.
ಗಂಗಾವತಿ: ನ-3 ನಗರದ ಬಡಾವಣೆಯೊಂದರಲ್ಲಿ ಕಾಮುಕನ ಅಟ್ಟಹಾಸಕ್ಕೆ ಏನು ಅರಿಯದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗಿದ ಘಟನೆ ನಗರದಲ್ಲಿ ನಡೆದಿದೆ.
ಪೋಷಕರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಪಕ್ಷದ ಮನೆಯ ಕಾಮುಕ ಸುರೇಶ್ (ಸೂರಿ) ಎನ್ನುವ ವ್ಯಕ್ತಿ ಮನೆಯ ಹತ್ತಿರ ಆಟವಾಡುತ್ತಿದ್ದ ಐದು ವರ್ಷದ ಪುಟ್ಟ ಮಗುವಿಗೆ ಒಂದು ರೂಪಾಯಿ ನಾಣ್ಯ ಕೊಟ್ಟು ಅವರ ಮನೆಯ ಪಕ್ಕದಲ್ಲಿರುವ ಹೊಸ ಮನೆಯ ಒಳಗೆ ಕರೆದೌಯ್ದು ಬಟ್ಟೆ ಬಿಚ್ಚಿ ಮೈಮೇಲೆ ಎರಗಿ ಅತ್ಯಚಾರ ಮಾಡಿದ್ದಾನೆ.
ಈ ಬಗ್ಗೆ ಮಗು ಪೋಷಕರ ಬಳಿ ಹೇಳಿದೆ, ಪೈಶಾಚಿಕ ಕೃತ್ಯ ತಿಳಿದ ಸ್ಥಳಿಯರು ಕಾಮುಕನಿಗೆ ಧರ್ಮದೇಟು ನೀಡಿ ನಗರ ಠಾಣೆಯ ಪಿ.ಐ ವೆಂಕಟಸ್ವಾಮಿ ಯವರಿಗೆ ಒಪ್ಪಿಸಿದ್ದಾರೆ. ಘಟನೆ ವಿವರ ಪಡೆದ ನಗರ ಠಾಣೆ ಅಧಿಕಾರಿಗಳು ಅತ್ಯಾಚಾರ ಎಸಗಿದ ವ್ಯಕ್ತಿಯ ಮೇಲೆ ಪೊಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.