Breaking News

ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.! ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..?

ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.!
ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..?

ತುಂಗಾವಾಣಿ.
ಗಂಗಾವತಿ: ಅ-4 ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಲ ಜೀವನ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ನಡೆದ ಗಲಾಟೆ ಈಗ ಮತ್ತೊಂದು ತಿರುವು ಪಡೆದಿದೆ.

ತಡರಾತ್ರಿ ಶಾಸಕ ಬಸವರಾಜ ದಡೆಸೂಗೂರು ಬೆಂಬಲಿಗ ಗ್ರಾಮದ ರಮೇಶ ಬಸಣ್ಣ ನಾಯಕ ಎನ್ನುವವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.

ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ವೇಳೆ ಅದೇ ಗ್ರಾಮದ ವಿ.ಪ್ರಸಾದ್ ಪಾಪಾರಾವ್. ಎಮ್.ಧನಂಜಯ. ನೆಕ್ಕಂಟಿ ನಾಗೇಶ್ವರರಾವ್ ಮೂರು ಜನರು ಸೇರಿಕೊಂಡು ಗ್ರಾಮದ ಸುಬ್ರಮಣ್ಯಂ ಸಿ.ಹೆಚ್. ಇವರ ಮನೆಯ ಹತ್ತಿರ ಸರಕಾರದ ಯೋಜನೆಯಾದ ‘ಜಲಜೀವನ ಮಿಷನ್ ಅಡಿಯಲ್ಲಿ’ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು. ನಾನು ಮತ್ತು ಮುರಳಿಕೃಷ್ಣ ಈರ್ವರೂ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುತ್ತೇವೆ. ಅದರಂತ ಅ-3ರಂದು ಕಾಮಗಾರಿ ಕೆಲಸವನ್ನು ಮಾಡಿಸುತ್ತಿದ್ದಾಗ.ವಿ.ಪ್ರಸಾದ್ ಪಾಪಾರಾವ್. ಎಮ್.ಧನಂಜಯ. ನೆಕ್ಕಂಟಿ ನಾಗೇಶ್ವರರಾವ್
ಮೂವರು ಸೇರಿಕೊಂಡು ಕಾಮಗಾರಿ ಸ್ಥಳಕ್ಕೆ ಬಂದು ಲೇ ಸುಳೇಮಕ್ಕಳಾ ನೀವು ಇಲ್ಲಿ ಏನು ಮಾಡುತ್ತಿದ್ದೀರಿ, ಈ ಊರಲ್ಲಿ ಏನೇ ಕೆಲಸ ಮಾಡಿದರೂ ನಮ್ಮನ್ನು ಕೇಳಿ ಮಾಡಬೇಕು. ಅಡ್ಡಿಪಡಿಸಿದ್ದಲ್ಲದೆ “ಲೇ ನಾಯಕ ಸುಳೇಮಗನೇ ನಮಗೆ ಎದುರು ಮಾತಡುವಷ್ಟು ಧೈರ್ಯ ಏನಲೇ ನಿನಗೆ ಎಂದು ಚಪ್ಪಲಿಯಿಂದ ನನ್ನ ತಲೆಗೆ ಹೊಡೆದರು ಎಂದು ಲಿಖಿತ ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಮಾಜಿ ಸಚಿವ ಶಿವರಾಜ ತಂಗಡಗಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಆರೋಪಿಯನ್ನು ಬಂಧನ ಮಾಡುವವರೆಗೂ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತಾಗ. ನಗರಠಾಣೆಯ ಪಿ.ಐ.ವೆಂಕಟಸ್ವಾಮಿಯವರು ಬಂದು ಈಗಾಗಲೇ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ನಮ್ಮ ಮೇಲೆ ಭರವಸೆ ಇಡಿ ಎಂದು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ತಂಗಡಗಿಯವರು ಆರೋಪಿಯನ್ನು 24 ಗಂಟೆಯೊಳಗೆ ಬಂದಿಸದಿದ್ದರೆ ಜಂಗಮರ ಕಲ್ಗುಡಿಯಿಂದ ಗಂಗಾವತಿ ವರಿಗೆ ಕಾಂಗ್ರೆಸ್ ಕಾರ್ಯಕರ್ತರರು ಪಾದ ಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು.

ಸದ್ಯಕ್ಕೆ ಜಂಗಮರ ಕಲ್ಗುಡಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಬೂದಿ ಮುಚ್ಚಿದ ಕೆಂಡದಂತಾಗಿದೆ ಗ್ರಾಮ. ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆ ಮುಂದೆ ಯಾವ ಹಂತ ತಲುಪುತ್ತದೆ ಕಾದು ನೋಡಬೇಕಿದೆ..!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಕಾಂಗ್ರೆಸ್ ಡಿಜಟಲ್ ಸದಸ್ಯತ್ವ ಅಭಿಯಾನದಲ್ಲಿ ಇಕ್ಬಾಲ್ ಅನ್ಸಾರಿ ನಂ 1. ಡಿಕೆ ಶಿವಕುಮಾರ್ ಶ್ಲಾಘನೆ.

ಕಾಂಗ್ರೆಸ್ ಡಿಜಟಲ್ ಸದಸ್ಯತ್ವ ಅಭಿಯಾನದಲ್ಲಿ ಇಕ್ಬಾಲ್ ಅನ್ಸಾರಿ ನಂ 1. ಡಿಕೆ ಶಿವಕುಮಾರ್ ಶ್ಲಾಘನೆ. ತುಂಗಾವಾಣಿ ಗಂಗಾವತಿ ಮಾ 23 …

error: Content is protected !!