Breaking News

ಶ್ರೀದೇವಿ ಮಟಕಾ ಸ್ಪೋಟ. ದಾಖಲಾದ ಕೇಸ್ ಎಷ್ಟು ಗೊತ್ತೆ.!? ಆ ಮಟಕಾ ನೇತೃತ್ವದ ಅಧಿಕಾರಿ ಯಾರು.? ತಂಗಡಗಿ ಹೇಳಿದ್ದೆನು..?

ಶ್ರೀದೇವಿ ಮಟಕಾ ಸ್ಪೋಟ.
ದಾಖಲಾದ ಕೇಸ್ ಎಷ್ಟು ಗೊತ್ತೆ.!?
ಆ ಮಟಕಾ ನೇತೃತ್ವದ ಅಧಿಕಾರಿ ಯಾರು.?
ತಂಗಡಗಿ ಹೇಳಿದ್ದೆನು..?


ತುಂಗಾವಾಣಿ.
ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಎಂದರೆ ಅದು ಕನಕಗಿರಿ ವಿಧಾನಸಭಾ ಕ್ಷೇತ್ರ, ಶ್ರೀದೇವಿ ಮಟಕಾ ದಂಧೆ ಭರ್ಜರಿಯಾಗಿ ನಡೆಯುತ್ತಿದೆ, ಇದಕ್ಕೆ ಪೋಲಿಸರ ಕುಮ್ಮಕ್ಕೂ ಇದೆ ಎಂದು ಹುಳ ಬಿಟ್ಟಿದ್ರು ಮಾಜಿ ಸಚಿವ ಶಿವರಾಜ್ ತಂಗಡಗಿ.

ಸಾಂದರ್ಭಿಕ ಚಿತ್ರ

ಹೌದು ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಟ್ರಾಕ್ಟರ್ ರ‌್ಯಾಲಿ ನಂತರ ಬಹಿರಂಗ ಸಮಾವೇಶದಲ್ಲಿ ತಂಗಡಗಿ ಹೇಳಿದ ಒಂದೇ ಒಂದು ಹೇಳಿಕೆ, ಕೊಪ್ಪಳ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು, ಆದರೆ ಶ್ರೀದೇವಿ ಮಟಕಾ ಆಡಿಸುವ ಅದರ ನೇತೃತ್ವ ವಹಿಸಿದ ಅಧಿಕಾರಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ,

ಜಾಹೀರಾತು
ಜಾಹೀರಾತು

ನೇರವಾಗಿ ಕೊಪ್ಪಳ ಜಿಲ್ಲಾ ವರಿಸ್ಠಾಧಿಕಾರಿಗಳಿಗೆ ದೂರು ಸಹ ಸಲ್ಲಿಸಿದ್ರು ತಂಗಡಗಿ. ಆದರೆ ಮುಂದೇನಾಯ್ತು ಗೊತ್ತೆ.?
ಇದು ಸಹಜ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಎಂಬತ್ತೆ ಮಾರ್ಚ್ ಮೊದಲ ವಾರದಲ್ಲಿ ಅತೀ ಹೆಚ್ಚು ಮಟಕಾ ಕೇಸ್ ದಾಖಲಾಗಿವೆ.

ಎಲ್ಲಿ ಅಂತಿರಾ.?ಇಲ್ಲಿವೇ ನೋಡಿ.

ಹೊಸಕೇರಾ ಗ್ರಾಮದಲ್ಲಿ ನಾಲ್ಕು ಜನರ ವಿರುದ್ಧ & ಶ್ರೀರಾಮನಗರ ಗ್ರಾಮದಲ್ಲಿ12 ಜನರ ವಿರುದ್ಧ ದೂರು ದಾಖಲಾದರೆ, ಇತ್ತ ಜೀರಾಳ. ಪ್ರಗತಿನಗರ. ಹೇರೂರು. ಮಲ್ಲಾಪುರ. ನವಲಿ ರಸ್ತೆಯ ನಾಗನಕಲ್. ಚಿಕ್ಕ ಬೆಣಕಲ್. ಸಿದ್ದಾಪುರ. ಉಳೆನೂರು. ಕೆಸರಹಟ್ಟಿ. ಆನೆಗೊಂದಿ. ಸಾಣಾಪುರ. ಗ್ರಾಮಗಳಲ್ಲಿ ತಲಾ ಇಬ್ಬರಂತೆ ಒಟ್ಟು 35 ಜನರ ಮೇಲೆ ಹಾಗು ಗಂಗಾವತಿ ನಗರದಲ್ಲಿ ಒಂಬತ್ತು ಜನರ ಮೇಲೆ. ಒಟ್ಟು 44 ಜನರ ವಿರುದ್ದ 24 ಮಟಕಾ ದಂಧೆಯ ಕೇಸ್ ದಾಖಲಾಗಿದ್ದು ಮಾರ್ಚ್ ಮೊದಲ ಒಂದೆ ವಾರದಲ್ಲಿ ಅನ್ನುವುದು ವಿಶೇಷ.!

ಆದರೆ ಇಷ್ಟೊಂದು ಮಟಕಾ ಕೇಸ್ ಎಂದು ದಾಖಲಾಗಿವೆ, ಆದರೆ ಇದು ಶ್ರೀದೇವಿ ನೋ… ಕಲ್ಯಾಣಿ ನೋ… ಮತೊಂದೊ… ಗೊತ್ತಿಲ್ಲ. ಒಟ್ನಲ್ಲಿ ಸಾಕಷ್ಟು ಕೇಸ್ ಗಳಂತೂ ದಾಖಲಿಸಿದ್ದಾರೆ. ಅವುಗಳು ಯಾವ ಕಂಪನಿ ಮಟಕಾ ಎಂದು ಬಯಲಿಗೆ ಬಂದಾಗ ಗೊತ್ತಾಗಲಿವೆ.

ದೂರು ನೀಡಿ ತಿಂಗಳಾದ್ರೂ ಯಾವ ಅಧಿಕಾರಿಗಳ ಮೇಲೆ ಕ್ರಮ ಇಲ್ಲ.!

ಮಾಜಿ ಸಚಿವ ತಂಗಡಗಿ ದೂರು ನೀಡಿ ತಿಂಗಳಾಗುತ್ತಾ ಬಂದರೂ ಪ್ರಕರಣದ ತನಿಖೆ ಚುರುಕು ಪಡೆದಿಲ್ಲ. ಕೇವಲ ಮಟ್ಕಾ ಅಡ್ಡೆಗಳ ಮೇಲೆ ದಾಳಿ ಮುಂದುವರೆದಿದೆ ಹೊರತು ಕಿಂಗ್ ಪಿನ್ ಯಾರು ಎಂಬುದು ಇನ್ನೂ ಬಯಲಾಗಿಲ್ಲ.!
ಮಾಜಿ ಸಚಿವ ತಂಗಡಗಿ ಅಧಿಕಾರಿಗಳ ದಾರಿ ತಪ್ಪಿಸಲು ಬಟ್ಟೆ ಹಾವು ಬಿಟ್ಟರೆ,,,? ಅಥವಾ ಕಿಂಗ್ ಪಿನ್ ಎನ್ನಲಾಗುತ್ತಿರುವ ಅಧಿಕಾರಿ ಭಾರಿ ಪ್ರಭಾವಿಯಾಗಿದ್ದು, ತಂಗಡಿಯ ಬಾಯಿ ಮುಚ್ಚಿಸಿದರೇ,,?
ಎಂಬ ಅನುಮಾಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.? ಇನ್ನಾದರೂ ನಮ್ಮ ಕೊಪ್ಪಳ ಜಿಲ್ಲಾ ಪೋಲಿಸ್ ವರಿಸ್ಠಾಧಿಕಾರಿಗಳು ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯುತ್ತಾರೋ ಕಾದು ನೋಡಬೇಕಿದೆ..!?

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.!

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.! ತುಂಗಾವಾಣಿ. ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದಲ್ಲಿ ಬಹಿರಂಗ …