ಕಲ್ಯಾಣಿ ಆಡಿದ್ರ ಹಿಡಿಕೊಂಡು ಹೋಗ್ತಾರೆ,
ಶ್ರೀದೇವಿ ಆಡಿದ್ರೆ ಬಿಟ್ಟು ಕಳಿಸ್ತಾರೆ.!
ತುಂಗಾವಾಣಿ.
ಕನಕಗಿರಿ: ಪೆ-15 ಪಟ್ಟಣದಲ್ಲಿ ಇಂದು ರೈತರಿಗೆ ಬೆಂಬಲವಾಗಿ ಮತ್ತು ಪೆಟ್ರೋಲ್ ಹಾಗು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಟ್ರ್ಯಾಕ್ಟರ್ ರ‌್ಯಾಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ.
ಕನಕಗಿರಿ ಕ್ಷೇತ್ರದಲ್ಲಿ ಹೊಸಾದು ಓಸಿ ಪಟ್ಟಿ ಚಾಲೂ ಆಗಿದೆ, ಅದರ ಹೆಸರು ಶ್ರೀದೇವಿ….
ನೇರದಿದ್ದ ಜನರು ಕಲ್ಯಾಣಿ ಎಂದರು ಅದು ಅಲ್ಲ ಇದು ಶ್ರೀದೇವಿ…
ಕಲ್ಯಾಣಿ ಎಂದರೆ ಹಿಡಿದುಕೊಂಡು ಹೊಗ್ತಾರೆ. ಶ್ರೀದೇವಿ ಎಂದ್ರೆ ಬಿಟ್ಟು ಕಳಿಸ್ತಾರೆ ಗೊತ್ತಾ. ಎಂದರು.!
ಯಾರು ಆಡಿಸುತ್ತಿದ್ದಾರೆ ಗೊತ್ತಾ.?
ಈ ಕ್ಷೇತ್ರದ ಪ್ರಮುಖ ಹುದ್ದೆ ಹೊಂದಿದ ಅಧಿಕಾರಿಗಳು,
ನಾನು ಈ ವೇದಿಕೆ ಮುಖಾಂತರ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿಕೊಳ್ಳುತ್ತೆನೆ, ಈಗ ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ನಡೆಯುತ್ತಿದೆ ಮುಂದೆ ಕನಕಗಿರಿ ಕ್ಷೇತ್ರಕ್ಕೆ ವ್ಯಾಪಿಸಲಿದೆ, ಇಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಯಾಕ ಮಾಡುತ್ತಿಲ್ಲ ಅವರಿಗೆ ಸಪೋರ್ಟ್ ಮಾಡುತ್ತಿರಿ ಎಂದು ನೇರವಾಗಿ ಶಾಸಕ ದಡೆಸೂಗುರು ವಿರುದ್ಧ ಹರಿ ಹಾಯ್ದರು, ನೀವೆ ನಿಂತು ಇಂತಹ ಚಟುವಟಿಕೆಗಳನ್ನು ಮಾಡಿಸುತ್ತಿರಿ ಎಂದು ಆರೋಪಿಸುವೆ,
ಇದರ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಜನರು ದುಶ್ಚಟದಿಂದ ಹಾಳಾಗುತ್ತಿದ್ದಾರೆ, ಈ ಕೂಡಲೇ ಗಮನ ಹರಿಸ .ಇಲ್ಲವಾದರೆ ಜಿಲ್ಲಾಡಳಿತ ಮುಂದೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ರೈತರು ಟ್ಯಾಕ್ಟರ್ ರ‌್ಯಾಲಿಗೆ ವಿಡಿಯೋ ಶೂಟಿಂಗ್ ಮಾಡ್ತಿರಿ, ಲಾರಿಯಲ್ಲಿ ಟ್ಯಾಕ್ಟರ್ ನಲ್ಲಿ ಮರಳು ದಂಧೆ ಮಾಡುವವರಿಗೆ ವಿಡಿಯೋ ಮಾಡಿ ಕಡಿವಾಣ ಹಾಕಿ ಅದನ್ನು ಬಿಟ್ಟು ರೈತರ ಹೋರಾಟ ವಿಫಲಯಾತ್ನ ಮಾಡಬೇಡಿ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.