ಒಂದು ಗಂಟೆಯಿಂದ ಒದ್ದಾಡಿ
ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ.
ತುಂಗಾವಾಣಿ.
ಕನಕಗಿರಿ ಮಾ-2 ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಎಂದು ಬಂದಿದ್ದ ಕನಕಗಿರಿ ತಾಲ್ಲೂಕಿನ ಗೌರಿಪುರ ಗ್ರಾಮದ ರಿಂದಮ್ಮ ಎಂಬ ಮಹಿಳೆ.
ಹೆರಿಗೆ ಮಾಡಿಸಲು ಯಾವುದೇ ವೈದ್ಯರು ಇಲ್ಲ ಇದ್ದ ಸಿಬ್ಬಂದಿಗಳು ಸಹ ಬೆಡ್ ನೀಡದೆ ಅನಾಗರಿಕರಂತೆ ವರ್ತಿಸಿರುವುದು ತಲೆ ತಗ್ಗಿಸುವಂತೆ ಮಾಡಿದೆ,
ಇಂದು ಬೆಳಿಗ್ಗೆ5-45 ರ ಸುಮಾರಿಗೆ ತಾಯಿ ಮಿನಾಕ್ಷಮ್ಮನ ಜೊತೆಗೆ ಬಂದಿದ್ದ ರಿಂದಮ್ಮ ಒಂದು ಗಂಟೆಯಿಂದ ಆಸ್ಪತ್ರೆಯ ಮುಖ್ಯ ದ್ವಾರದಲ್ಲೆ ಕುಳಿತರು ವೈದ್ಯರಾಗಲಿ ಸಿಬ್ಬಂದಿಗಳಾಗಲಿ ಹೆರಿಗೆ ಮಾಡಿಸುವ ಪ್ರಯತ್ನ ಮಾಡಿಲ್ಲ ಬೆಡ್ ಸಹ ನೀಡಿಲ್ಲ ಮುಖ್ಯ ದ್ವಾರದಲ್ಲೆ ರಕ್ತದ ಮಡುವಿನಲ್ಲಿ ಒದ್ದಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಾ ತಾಯಿ,
ಖಾಸಗಿ ಆಸ್ಪತ್ರೆಯಲ್ಲಿ ಡ್ಯೂಟಿ.!
ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡ ಅರೆಕಾಲಿಕ ವೈದ್ಯ ನಾಗರಾಜ ಪಾಟೀಲ್ ಯಾವಾಗಲೂ ತಮ್ಮ ಸ್ವಂತ ಖಾಸಗಿ ಆಸ್ಪತ್ರೆಯಲ್ಲೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಸ್ಥಳಿಯರ ಆರೋಪ.
ಏನೆ ಇರಲಿ ವೈದ್ಯರನ್ನು ದೇವರು ಎಂದು ಭಾವಿಸಿ ಬರುವ ಸಾರ್ವಜನಿಕರಿಗೆ, ಅನಾಗರಿಕರಂತೆ ವರ್ತಿಸಿರುವುದು ಕೊಪ್ಪಳದ ಜನತೆ ತಲೆ ತಗ್ಗಿಸುವಂತೆ ಮಾಡಿದೆ.
ಸಂಬಂಧಿಸಿದ ಅಧಿಕಾರಿಗಳು ಇಂತಹ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.