ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ ಬಂಧನ.
ಕಿಂಗ್-ಪಿನ್ ಪರಾರಿ.!
ತುಂಗಾವಾಣಿ.
ಗಂಗಾವತಿ: ಮಾ-26 ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ,
ಶ್ರೀರಾಮನಗರ ಗ್ರಾಮದ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮನೆ ಹತ್ತಿರ ಮಾ-25ರ ರಾತ್ರಿ 9 ರ ಸುಮಾರಿಗೆ ಅಂದರ್-ಬಾಹರ್ ಆಡುತ್ತಿದ್ದ ವೇಳೆಗೆ ಗಂಗಾವತಿ PSI ದೊಡ್ಡಪ್ಪರ ನೇತೃತ್ವದ ತಂಡ ದಾಳಿ ಮಾಡಿ ಒಟ್ಟು ಒಂಬತ್ತು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ,
ಅಂದರ್ ಆದವರು ಯಾರು.?
ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಟದ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ: ದೇವಪ್ಪ ತಂದೆ ಹನುಮಂತಪ್ಪ. ಸತ್ಯಬಾಬು ತಂದೆ ನಾಗೇಶ್ವರರಾವ್. ಸತ್ಯನಾರಯಣ ತಂದೆ ಸುಬ್ಬಾರಾವ್. ಶ್ರೀನಿವಾಸ್ ತಂದೆ ಸತ್ಯರಾಜು. ರಾಜು ತಂದೆ ವೆಂಕಟೇಶ. ನಾಗರಾಜ ತಂದೆ ಕೊಂಡಯ್ಯ. ಈಶ್ವರ ತಂದೆ ಏರ್ ಬಾಬು. ಆಂಜನೇಯಲು ತಂದೆ ನರಸಿಂಹಲು. ದುರ್ಗಾಪ್ರಸಾದ್ ತಂದೆ ಪದ್ದಾವೆಂಕಟೀಶ. ಇವರನ್ನು ಬಂಧಿಸಲಾಗಿದೆ,
ಆದರೆ ಈ ಅಂದರ್-ಬಾಹರ್ ಕಿಂಗ್ ಪಿನ್ ಎಂದೆ ಖ್ಯಾತಿ ಹೊಂದಿರುವ ಕೊಂಡಯ್ಯ ವಾಸನಶೆಟ್ಟಿ ಎನ್ನುವ ವ್ಯಕ್ತಿ (ಆಟ ಆಡಿಸುವ ವ್ಯಕ್ತಿ) ಪರಾರಿಯಾಗಿದ್ದಾನೆ.!? ಅಂದರ್ ಬಾಹರ್ ಜೂಜಾಟದ ಸಂಬಂಧಿಸಿದಲ್ಲಿ ನಗದು ₹ 7020-00 ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.