Breaking News

ಕೊಪ್ಪಳ: ವ್ಯಕ್ತಿ ಅಪಹರಣ.! ಇಬ್ಬರ ಮೇಲೆ FIR

ಕೊಪ್ಪಳ: ವ್ಯಕ್ತಿ ಅಪಹರಣ.!
ಇಬ್ಬರ ಮೇಲೆ FIR..!


ತುಂಗಾವಾಣಿ.
ಕೊಪ್ಪಳ: ಜ-20 ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಂಡರಗಲ್ ಗ್ರಾಮದ ಶೇಖರಪ್ಪ ಮುತ್ತಪ್ಪ ಹರಿಜನ (30) ಇವರು ಜ-15 ರಂದು ಅಪಹರಣ ಮಾಡಲಾಗಿದೆ ಎಂದು ಜ-19 ರಂದು ಶೇಖರಪ್ಪನ ತಾಯಿ ಹುಲಿಗೆಮ್ಮ ಗಂ.ಮುತ್ತಪ್ಪ ಹರಿಜನ, ಹನುಮಸಾಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,

ಘಟನೆ ವಿವರ:
ಶೇಖರಪ್ಪ ಮುತ್ತಪ್ಪ ಹರಿಜನ ಜ-15 ರಂದು ಮನೆಯಲ್ಲಿ ಇರುವಾಗ ಅದೇ ಗ್ರಾಮದ ಕರಿಗೌಡ ತಂ.ಕನಕಪ್ಪ ಗೌಡರ್, ಸಾ, ಬಂಡರಗಲ್, ಮತ್ತು ದ್ಯಾಮಣ್ಣ ತಂ.ಹನುಮಪ್ಪ ತೊನಸಿಹಾಳ ಸಾ.ಕಾಟಾಪುರ, ಇಬ್ಬರು ಸಾಯಂಕಾಲ 7ರ ಸುಮಾರಿಗೆ ಶೇಖರಪ್ಪನ ಮನೆಗೆ ಬಂದು ಶೇಖರಪ್ಪನನ್ನು ಕರೆದರು, ಆಗ ಮುತ್ತಪ್ಪ ತಮ್ಮ ಮನೆಯಲ್ಲಿ ಬಹಿರ್ದಸೆಗೆ ಹೋಗುವುದಾಗಿ ತಿಳಿಸಿ ಹೊರಗಡೆ ಹೋಗಿದ್ದು, ರಾತ್ರಿ 10ರ ಸಮಯವಾದರೂ ಮನೆಗೆ ಬರದ ಕಾರಣ, ತಮ್ಮ ಮನೆಯ ಅಕ್ಕ ಪಕ್ಕದ ಮನೆಯಯವರಿಗೆ ವಿಚಾರಿಸಲಾಗಿ ಎಲ್ಲೂ ಇಲ್ಲ ಎನ್ನುವ ಮಾಹಿತಿ ದೊರೆತ ನಂತರ, ಮನೆಯವರು ಶೇಖರಪ್ಪನ ಪೋನ್ ಗೆ ಕರೆ ಮಾಡಿದಾಗ ಸ್ವಿಸ್ ಆಫ್ ಬಂದಿರುತ್ತೆ, ನಂತರ ತಮ್ಮ ಸಂಬಂಧಿಕರಿಗೆ ಕರೆ ಮಾಡಿದಾಗ ಅಲ್ಲಿಯೂ ಇಲ್ಲದಿರುವ ಮಾಹಿತಿ ಸಂಬಂಧಿಕರು ತಿಳಿಸಿರುತ್ತಾರೆ, ನಂತರ ಕರೆಗೌಡ ಮತ್ತು ದ್ಯಾಮಣ್ಣ ಇವರಿಗೆ ಪೋನ್ ಕರೆ ಮಾಡಿದಾಗ ಅವರ ಪೋನ್ ಸಹ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎನ್ನುವ ಪೋನ್ ಸಂಭಾಷಣೆ ತಿಳಿಯುತ್ತೆ,

ನಂತರ ಜ-17 ರಂದು ಶೇಖರಪ್ಪನ ಮೊಬೈಲ್ ನಂಬರ್ ನಿಂದ ಶೇಖರಪ್ಪ ಮನೆಯವರಿಗೆ ಕರೆ ಮಾಡಿ, ನಾಳೆ ಬರುತ್ತೆನೆ ಎಂದು ಅವಸರ ಅವಸರವಾಗಿ ಮಾತನಾಡಿ ಮತ್ತೆ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತಾರೆ, ಇದರಿಂದ ಕಂಗಾಲಾದ ಶೇಖರಪ್ಪನ ಕುಟುಂಬ, ದ್ಯಾಮಣ್ಣ ಹರಿಜನ ಮತ್ತು ಕರೆಗೌಡ ಇಬ್ಬರ ಮೇಲೆ ಅನುಮಾನ ಗೊಂಡು ಇವರಿಬ್ಬರು ಸೇರಿ ನನ್ನ ಮಗ ಶೇಖರಪ್ಪ ಹರಿಜನ ನನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ, ಶೇಖರಪ್ಪನ ತಾಯಿ ಹುಲಿಗೇಮ್ಮ ಹನುಮಸಾಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ದೂರು ಸ್ವೀಕರಿಸಿದ ಪೋಲಿಸರು ತನಿಖೆ ಕೈಗೊಂಡಿದ್ದಾರೆ.!!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಮಿಂಚಿನ ಕಾರ್ಯಾಚರಣೆ: ಪಂದ್ಯದ ಹುಂಜಗಳ ಸಮೇತ ಒಂಬತ್ತು ಜನರ ಬಂಧನ .

ಮಿಂಚಿನ ಕಾರ್ಯಾಚರಣೆ: ಪಂದ್ಯದ ಹುಂಜಗಳ ಸಮೇತ ಒಂಬತ್ತು ಜನರ ಬಂಧನ . ತುಂಗಾವಾಣಿ. ಗಂಗಾವತಿ: ಜ-15 ಸಂಕ್ರಮಣದ ಪ್ರಯುಕ್ತ ತಾಲ್ಲೂಕಿನ …