2021 ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ.
ತುಂಗಾವಾಣಿ
ಕೊಪ್ಪಳ ಜ 20 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ 2021 ಸಾಲಿನ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮತದಾರರ ನೊಂದಣಾಧಿಕಾರಿಗಳು ಹಾಗು ಉಪ ವಿಭಾಗಾಧಿಕಾರಿಗಳಾದ ನಾರಾಯಣರೆಡ್ಡಿ ಕನಕರಡ್ಡಿ ಆಯ್ಕೆ ಯಾಗಿದ್ದು ಇದೆ ದಿನಾಂಕ 25-01-2021 ರಂದು ” ಬೆಸ್ಟ್ ಎಲೆಕ್ಟೊರಾಲ್ ರಿಜಿಸ್ಟೆಷನ್ ಆಫೀಸರ್ ” ಪ್ರಶಸ್ತಿ ಲಭಿಸಿದ್ದು, ಪುಟ್ಟಣ್ಣಚೆಟ್ಟಿ ಪುರಭವನ ಟೌನ್‌ಹಾಲ್ ಬೆಂಗಳೂರ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹಾಜರಾಗಿ ಪ್ರಶಸ್ತಿ ಸ್ವೀಕರಿಸುವಂತೆ ಉಪ ಮುಖ್ಯ ಚುನಾವಣಾಧಿಕಾರಿ ಹಾಗು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಕೆಯಂ ಪ್ರಾಣೇಶ್ ಅವರು ಕೊಪ್ಪಳ ಉಪ ವಿಭಾಗಾಧಿಕಾರಿ ನಾರಾಯಣ ರಡ್ಡಿ ಅವರಿಗೆ ಆಹ್ವಾನ ಪತ್ರ ಕಳುಹಿಸುವ ಮೂಲಕ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಅಧ್ಯಕ್ಷ, ಉಪಾಧ್ಯಕ್ಷ, ಚುನಾವಣೆಯಲ್ಲಿ ಮತ್ತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತೀ ಉತ್ಸಾಹಿಯಾಗಿ ಯಾವುದೇ ಅಡೆ ತಡೆ ಬರದೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುದ್ದರು, ಕೊಪ್ಪಳ ಜಿಲ್ಲೆಗೆ ಅತ್ಯಂತ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆ ಸ್ವತಃ ಅಧಿಕಾರಿ ವಲಯದಲ್ಲೇ ಕೇಳಿ ಬರುತ್ತಾನೆ ಇದೆ.
ಏನೆ ಇರಲಿ ರಾಜ್ಯದ 54 ಸಹಾಯಕ ಆಯುಕ್ತರ ಪೈಕಿ ಕೊಪ್ಪಳ ಜಿಲ್ಲೆಗೆ ಬೆಸ್ಟ್ ಇಸಿಒ ಪ್ರಶಸ್ತಿ ಲಭಿಸಿದ್ದು ಕೊಪ್ಪಳ ಜಿಲ್ಲೆಯ ಹೆಮ್ಮೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರ್ತಾಯಿದೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.