ಕೊಪ್ಪಳ ಜಿಲ್ಲೆಯ ಉಸ್ತುವಾರಿ ಕೌರವನಿಗೂ ವಕ್ಕರಿಸಿತೆ ಕರೊನಾ.
ಕೊಪ್ಪಳದ ಹೇಮಲತಾ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ,
ತುಂಗಾವಾಣಿ.
ಕೊಪ್ಪಳ: ಜು31 ಜಿಲ್ಲೆಯ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಗೆ ಕರೊನಾ ವೈರಸ್ ಸೊಂಕು ದೃಢಪಟ್ಟಿದೆ, ಈಗ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೊಂ ಕ್ವಾರೆಂಟೆನ್ ಆಗಿರುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ, ನನ್ನ ಜೊತೆಗೆ ಐವರಿಗೆ ಪಾಜಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ,
ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಬಿಜೆಪಿ ಕಛೇರಿ ಉದ್ಘಾಟನೆ ಮಾಡಿದ್ದರು, ಹಲವಾರು ಅಧಿಕಾರಿಗಳ ಜೊತೆಗೆ ಹಾಗು ಕಾರ್ಯಕರ್ತರ ಜೊತೆಗೆ ಭೇಟಿಯಾಗಿದ್ದರು,
ಕಾರ್ಯಕರ್ತರಿಗೆ,ಅಧಿಕಾರಿಗಳಿಗೂ ಡವ ಡವ..!
ಜಿಲ್ಲೆಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಚಿವ, ಕಾರ್ಯಕರ್ತರು ಅಧಿಕಾರಿಗಳು ಭಾಗಿಯಾಗಿದ್ದರು,
ಅವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸಚಿವ ಸಲಹೆ ನೀಡಿದ್ದಾರೆ,
ಯಾರು ಆತಂಕಕ್ಕೆ ಒಳಗಾಗಬೇಡಿ ಕೊವಿಡ್ ವೈರಸ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ, ಜೊತೆಗೆ ನಿಮ್ಮೆಲ್ಲರ ಆರ್ಶೀವಾದ ಹಾರೈಕೆ ಇರಲಿ ಎಂದು ಟ್ವಿಟರ್ ಮೂಲಕ ಸಂದೇಶ ಕಳುಹಿಸಿದ್ದಾರೆ..!
ಕೊಪ್ಪಳದ ಶ್ರೀಮತಿ ಹೇಮಲತಾ ನಾಯಕ್ ಆಯ್ಕೆ..!
ಇಂದು ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಕೊಪ್ಪಳದ ಶ್ರೀಮತಿ ಹೇಮಲತಾ ನಾಯಕ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.