ಸಂಜೆ ನಾಲ್ಕರಿಂದ ಸ್ವಯಂ ಪ್ರೇರಿತ ಲಾಕ್ ಡೌನ್.
ಶಾಸಕ ಪರಣ್ಣ ಮುನವಳ್ಳಿ.
ತುಂಗಾವಾಣಿ
ಗಂಗಾವತಿ ಜುಲೈ 08 ನಗರದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೊಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ನಗರದ ವರ್ತಕರು ಸ್ವಯಂ ಪ್ರೇರಿತರಾಗಿ ಪ್ರತಿದಿನ ಸಂಜೆ ನಾಲ್ಕು ಗಂಟೆಯಿಂದ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡಿ ಸ್ವಯಂ ಲಾಕ್ ಡೌನ್ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಿ ಎಲ್ಲ ಸಣ್ಣಪುಟ್ಟ ಅಂಗಡಿಕಾರರು ಹೋಟಲ್ ಗಂಜ್ ವ್ಯಾಪಾರಿಗಳು ಎಲ್ಲರೂ ಸಹ ಬೆಳಿಗ್ಗೆ ಆರರಿಂದ ಸಂಜೆ ನಾಲ್ಕು ಗಂಟೆಯವರೆಗೆ ತಮ್ಮ ವ್ಯಾಪಾರ ಮಾಡಿಕೊಂಡು ಸಂಜೆ ನಾಲ್ಕರಿಂದ ಗಂಗಾವತಿ ಸ್ವಯಂ ಲಾಕ ಡೌನ್ ಗೆ ಸಹಕರಿಸಿ ಎಂದು ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ಇಂದು ತಮ್ಮ ಕಛೇರಿಯಲ್ಲಿ ಸಭೆ ಸೇರಿದ್ದ ವರ್ತಕರು ಹಾಗು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.