Breaking News

ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿರುವ ಕೊಚಿಂಗ್ ಸೆಂಟರ್ ಗಳು..!

ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿರುವ ಕೊಚಿಂಗ್ ಸೆಂಟರ್ ಗಳು..!

ತುಂಗಾವಾಣಿ
ಕೊಪ್ಪಳ ಜುಲೈ 04 ಮಹಾಮಾರಿ ಕೊರೋನಾ ಇಡೀ ದೇಶಾದ್ಯಾಂತ ತನ್ನ ಅಟ್ಟಹಾಸ ಮೆರೆಯುತ್ತಿದೆ. ಖಾಸಗಿ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗಳು ಅವಕಾಶ ಇಲ್ಲದಿದ್ದರು ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾವೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಅನಧಿಕೃತವಾಗಿ ಯಾರ ಅನುಮತಿ ಇಲ್ಲದೆ ಖಾಸಗಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿವೆ. ನಿತ್ಯ ನೂರಾರು ವಿದ್ಯಾರ್ಥಿಗಳು ಕಂಪ್ಯೂಟರ್ ಕೋಚಿಂಗ್ ಪಡೆಯುತ್ತಿದ್ದಾರೆ. ಕಂಪ್ಯೂಟರ್ ಕೋಚಿಂಗ್ ನಡೆಸಲು ಸರ್ಕಾರದಿಂದ ಯಾವ ಅನುಮತಿ ಬಂದಿಲ್ಲ ಆದ್ರೂ ಕೂಡ ಸರ್ಕಾರದ ಯಾವ ನಿಯಮಗಳನ್ನು ಪಾಲಿಸದೆ ಸೆಂಟರ್ ನಡೆಸುತ್ತಿದ್ದಾರೆ. ಕೊಚಿಂಗ್ ಸೆಂಟರ್ ನಲ್ಲಿ ಯಾವುದೇ ಸ್ಯಾನಿಟೈಸರ್, ಮಾಸ್ಕ್ ಬಳಸದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋಚಿಂಗ್ ನಡೆಸುತ್ತಿರುವುದು ಕಂಡು ಬಂದಿರುವಂತದ್ದು, ಇನ್ನೂ ಜಿಲ್ಲೆಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ರಣಕೇಕೆ ಬಾರಿಸುತ್ತಿದೆ. ಅದನ್ಯಾವುದನ್ನು ಲೆಕ್ಕಿಸದೆ ಕೋಚಿಂಗ್ ಹೆಸರಿನಲ್ಲಿ ನೂರಾರು ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ. ರಾಜಾರೋಷವಾಗಿ ಕೋಚಿಂಗ್ ಸೆಂಟರ್ ಗಳು ನಡೆಸುತ್ತಿದ್ದರು. ಈಗಾಗಲೇ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರು ಶತಕ ದಾಟಿದ್ದು ಇನ್ನೂ ಹೆಚ್ಚಾಗುವ ಸಂಭವವಿದ್ದು ಸ್ಥಳೀಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೆಚ್ಚುತ್ತಿರುವ ಕೊರೋನಾ ಭೀತಿಯಲ್ಲಿ ಅನುಮತಿ ಇಲ್ಲದೆ ನಡೆಸುತ್ತಿರುವ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗಳನ್ನ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ತಂದ D.M. ರವಿ.

ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ತಂದ D.M. ರವಿ. ತುಂಗಾವಾಣಿ ಗಂಗಾವತಿ ಜುಲೈ:1 ಕಳೆದ ಜೂನ್ 12 ರಂದು ಸೇವೆಯಿಂದ ಅಮಾನತ್ತಾಗಿದ್ದ …