Breaking News

ಸ್ಥಳೀಯರ ಒತ್ತಡಕ್ಕೆ ಮಣಿದ ತಾಲ್ಲೂಕು ಆಡಳಿತ. ಮೃತದೇಹ ಬೇರೆಡೆ ಸ್ಥಳಾಂತರ..!

ಸ್ಥಳೀಯರ ಒತ್ತಡಕ್ಕೆ ಮಣಿದ ತಾಲ್ಲೂಕು ಆಡಳಿತ. ಮೃತದೇಹ ಬೇರೆಡೆ ಸ್ಥಳಾಂತರ..!

ತುಂಗಾವಾಣಿ
ಗಂಗಾವತಿ.ಜು9 ನಗರದ ಹಿರೆಜಂತಗಲ್ ನ ನಾಗರಿಕ ಒತ್ತಾಯಕ್ಕೆ ಹಾಗು ಶಾಸಕ ಪರಣ್ಣ ಮನವಳ್ಳಿಯವರ ಮನವಿಗೆ ಸ್ಪಂದಿಸಿದ ತಾಲ್ಲೂಕು ಆಡಳಿತ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಬೇರೆಡೆ ಸಾಗಿಸಿದರು. ಇದೆ ವೇಳೆ ಮಾತನಾಡಿದ ಸ್ಥಳೀಯ ವಾರ್ಡಿನ ಮಾಜಿ ಸಗರಸಭೆ ಸದಸ್ಯ ರಾಘವೇಂದ್ರ ಶೆಟ್ಟಿ ಕರೊನಾ ಸೊಂಕು ತಗುಲಿದರೆ ಸುಮಾರು ನೂರಾರು ಮೀಟರ್ ಸೀಲ್ ಡೌನ್ ಮಾಡುತ್ತಿರಿ. ಆದರೆ ಮೃತಪಟ್ಟ ದೇಹದ ಅಂತ್ಯ ಸಂಸ್ಕಾರ ಕೇವಲ ಹತ್ತು ಮೀಟರ್ ಅಂತರದಲ್ಲಿದೆ ಅಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಸೊಂಕು ತಗುಲುವ ಭಯ ಸುತ್ತ ಮುತ್ತಲಿನ ಜನರಿಗೆ ಇರುವುದರಿಂದ ತಾವು ಬೇರೆಡೆ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎಂದು ತಹಶಿಲ್ದಾರ ಎಲ್ ಡಿ ಚಂದ್ರಕಾಂತರವರಿಗೆ ಮನವಿ ಮಾಡಿದರು. ನಂತರ ಶಾಸಕ ಪರಣ್ಣ ಮನವಳ್ಳಿ ಜನರ ನಾಡಿ ಮಿಡಿತಕ್ಕೆ ಧ್ವನಿಯಾಗಿ ತಾಲ್ಲೂಕು ಆಡಳಿತಕ್ಕೆ ಮನವರಿಕೆ ಮಾಡಿ ಬೇರೆಡೆ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಸಿದರು. ಈ ಸಂದರ್ಭದಲ್ಲಿ ಹುಸೇನಪ್ಪ ಹಂಚಿನಾಳ ಆರತಿ ತಿಪ್ಪಣ್ಣ ರಾಘವೇಂದ್ರ ಶೆಟ್ಟಿ ಸುರೇಶ್ ಲಲಿತಮ್ಮ ತಿಮ್ಮಣ್ಣ ಹಾಗು ನೂರಾರು ಜನ ಬಾಗಿಯಾಗಿದ್ದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …