ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾರ್ಯಕರ್ತೆಯರು.!
ತುಂಗಾವಾಣಿ
ಗಂಗಾವತಿ: ಜು.3 ತಾಲ್ಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಮಾಡಿದರು.
ಅಂಗನವಾಡಿ ಕೆಲ ಕಾರ್ಯಕರ್ತರು ಮಾತನಾಡಿ ಕೊರೋನ್ ವಾರಿಯರ್ಸ್ ಆಗಿ ಕೆಲಸ ಮಾಡುವ ನಾವು ಸರಕಾರದ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರಗಳ ಗಮನಕ್ಕೆ ಬರುತ್ತಿಲ್ಲ. ಅಲ್ಲದೆ ಈ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದರರು.
ಕರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಹೆಚ್ಚುವರಿ ಹಣ ನೀಡಲೇ ಬೇಕು.ಕೋವಿಡ್-19 ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಯಾವುದೇ ಅವಘಡಕ್ಕೀಡದವರಿಗೆ 50 ಲಕ್ಷಕ್ಕೆ ವೈದ್ಯಕೀಯ ವಿಮೆ ಹೆಚ್ಚಿಸಬೇಕು.
ಬೇಸಿಗೆ ರಜೆಯೂ ನೀಡದೇ ದುಡಿಸಿದ ಅಂಗನವಾಡಿ ನೌಕರರಿಗೆ 15 ದಿನದ ಗೌರವಧನ ಹೆಚ್ಚುವರಿಯಾಗಿ ನೀಡಬೇಕು.
ಈಗಾಗಲೇ ನಿವೃತ್ತಿ ಆದವರಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು .ಪಾನ್ ಕಾರ್ಡ್ ಇಲ್ಲದವರಿಗೆ.ಪಾನ್ ಕಾರ್ಡ್ ಕೊಡಬೇಕು. ವಂತಿಗೆ ಹಣ ಕಡಿತ ಮಾಡದವರಿಗೂ ನಿವೃತ್ತ ಹಣ ನೀಡಬೇಕು.
ಅಂಗನವಾಡಿ ನೌಕರರಿಗೆ ಖಾಯಂ ಪಿಂಚಣಿ ನೀಡಬೇಕು
ಆದಾಯ ತೆರಿಗೆಗೆ ಒಳಪಡದ ಕುಟುಂಬಕ್ಕೆ ಆರು ತಿಂಗಳ ವರೆಗೆ ಜೀವನ ನಿರ್ವಹಣೆ ಗಾಗಿ 7500 ರೂ ನೀಡಬೇಕು
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ವರ್ಷ ಕ್ಕೆ 200 ದಿನಗಳಿಗೆ ವಿಸ್ತರಿಸಿ ವಲಸೆ ಕಾರ್ಮಿಕ ರಿಗೂ ಕೆಲಸ ನೀಡಬೇಕು
ಕಾರ್ಮಿಕ ಕಾನೂನು ತಿದ್ದುಪಡಿ ಕೈಬಿಡಿ.ಕಾರ್ಮಿಕರಿಗೆ ಲಾಕ್ ಡೌನ್ ಸಂದರ್ಭದ ಬಾಕಿ ವೇತನ ನೀಡಿ.ಪೂರ್ಣ ವೇತನ.ಕೆಲಸ ನೀಡಬೇಕು
ಕರೊನಾ ಸೋಂಕಿನ ಚಿಕಿತ್ಸೆಯನ್ನು ಖಾಸಗಿ ಗೆ ವಹಿಸದೇ ಸರ್ಕಾರಿ ಆಸ್ಪತ್ರೆ ಗಳಲ್ಲೇ ಉಚಿತವಾಗಿ ನೀಡಬೇಕು ಎಂದು ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು. ಇ ಸಂದರ್ಬದಲ್ಲಿ ಶ್ರೀ ಮತಿ ನಾಗರತ್ನಮ್ಮ ಅನಂತಲಕ್ಷ್ಮಿ ಚಿನ್ನಮ್ಮ . ಮಂಜುಳಾ ಪೋ.ಪಾಟೀಲ್ ಮುಸ್ಟೂರು ಹಾಗು ಸುತ್ತಮುತ್ತಲಿನ ಗ್ರಾಮದ ಕಾರ್ಯಕರ್ತೆರ ಪದಾಧಿಕಾರಿಗಳು ಭಾಗವಹಿಸಿದ್ದರು
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.