ಕೊಪ್ಪಳ. ಇಂದು ಹತ್ತು ಪಾಜಿಟಿವ್ ಪ್ರಕರಣಗಳು ಪತ್ತೆ..!
ತುಂಗಾವಾಣಿ.
ಕೊಪ್ಪಳ: ಜು.10 ಜಿಲ್ಲೆಯಲ್ಲಿ ಇಂದು ಹತ್ತು ಕೊವಿಡ್19 ಪಾಜಿಟಿವ್ ಪ್ರಕರಣಗಳು ಕಂಡುಬಂದಿದ್ದು ಅದರಲ್ಲಿ ಆರು ಪ್ರಕರಣಗಳು ಗಂಗಾವತಿಗೆ ವಕ್ಕರಿಸಿವೆ. ಗಂಗಾವತಿ ನಗರದ ಜುಲೈ ನಗರದ ಪ್ರದೇಶದಲ್ಲಿಮೂರು ಜನರಿಗೆ ಕರೊನಾ ಸೊಂಕು ತಗುಲಿದ್ದು ನಿನ್ನೆ ಕೊರೊನಾ ಸೊಂಕಿಗೆ ಸಾವನ್ನಪ್ಪಿದ ಹಿರೆಜಂತಗಲ್ ಏರಿಯಾದಲ್ಲಿ ಒಬ್ಬರಿಗೆ ಕರೊನಾ ಪಾಜಿಟಿವ್ 28 ವರ್ಷದ ಯುವಕನಿಗೆ ಪಾಜಿಟಿವ್ ವರದಿ ಯಾಗಿದೆ. ಇನ್ನೊಂದು ಪ್ರಕರಣದಲ್ಲಿ ಬಳ್ಳಾರಿ ಜಿಲ್ಲೆಯ ಕಾರಿಗನೂರು ಗ್ರಾಮಕ್ಕೆ ಹೋಗಿ ಬಂದಿರುವ 60 ವ್ಯಕ್ತಿಗೆ ಸೊಂಕು ತಗುಲಿದೆ. ಕೊಪ್ಪಳ ತಾಲ್ಲೂಕು ಕುಷ್ಟಗಿ ತಾಲ್ಲೂಕು ನಲ್ಲಿ ತಲಾ ಎರೆಡು ಪಾಜಿಟಿವ್ ಪ್ರಕರಣಗಳು ಸೇರಿ ಒಟ್ಟು ಹತ್ತು ಸೊಂಕಿತರು ಜಿಲ್ಲೆಯಲ್ಲಿ ಕಂಡು ಬಂದಿದ್ದಾರೆ ಎಲ್ಲರನ್ನೂ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಸಂರ್ಪಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ಮಗ್ನರಾಗಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.