ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಹೆಸರಿನ ಫೇಸ್ಬುಕ್ ಅಕೌಂಟ್ ಹ್ಯಾಕ್,ದೂರು ದಾಖಲಿಸಲು ಸೂಚನೆ
ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪರಣ್ಣ ಮುನವಳ್ಳಿ ರವರ ಹೆಸರಿನಲ್ಲಿರುವ ಪೇಸ್ಬುಕ್ ಅಕೌಂಟ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಸಾರ್ವಜನಕರಿಂದ ಹಣದ ಬೇಡಿಕೆ ಇಡುತ್ತಿದ್ದಾರೆ ಯಾರು ಕೂಡ ಹಣವನ್ನು ಹಾಕಬಾರದು ಎಂದು ಶಾಸಕರಾದ ಪರಣ್ಣ ಮುನವಳ್ಳಿರವರು ತಮ್ಮ ಅಧಿಕೃತ ಫೇಸ್ಬುಕ್ ಅಕೌಂಟ್ ನಲ್ಲಿ ಬರೆದು ಮನವಿ ಮಾಡಿದ್ದಾರೆ ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.