Breaking News

45 ಕೇಸ್ ದಾಖಲಾಗಿದ್ದ ವ್ಯಕ್ತಿಯ ಗಡಿಪಾರು.

45 ಕೇಸ್ ದಾಖಲಾಗಿದ್ದ ವ್ಯಕ್ತಿಯ ಗಡಿಪಾರು.

ತುಂಗಾವಾಣಿ
ಕೊಪ್ಪಳ ಡಿ 06 ಜಿಲ್ಲೆಯ ಕನಕಗಿರಿ ಪಟ್ಟಣದ ವ್ಯಕ್ತಿಯೋರ್ವ ಮಟ್ಕಾ ಜೂಜಾಟವನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಸುಮಾರು 45 ಪ್ರಕರಣಗಳು ದಾಖಲಾಗಿ 7 ಪ್ರಕರಣಗಳಲ್ಲಿ ಅಪರಾದ ಸಾಬೀತಾಗಿ ದಂಡ ಕಟ್ಟಿ ಹಾಗು ಅನೇಕ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ತನ್ನ ಮಟ್ಕಾ ಜೂಜಾಟದಂತಹ ಅಕ್ರಮ ಚಟುವಟಿಕೆಗಳನ್ನು ಬಿಡದ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ವಿಶ್ವನಾಥಸ್ವಾಮಿ ತಂದೆ ಸಂಗಯ್ಯಸ್ವಾಮಿ ಮಲ್ಲದಗುಡ್ಡ (45) ಎಂಬ ವ್ಯಕ್ತಿಯನ್ನು ಆತನ ಮೇಲಿರುವ ಪ್ರಕರಣಗಳ ವಿಚಾರಣೆ ಮೇರೆಗೆ ಕೊಪ್ಪಳ ಜಿಲ್ಲೆಯಿಂದ ಉತ್ತರಕನ್ನಡ ಜಿಲ್ಲೆಗೆ ಗಡಿಪಾರು ಮಾಡಿ ಕೊಪ್ಪಳ ಜಿಲ್ಲಾ ಉಪವಿಭಾಗಾಧಿಕಾರಿ ನಾರಾಯಣ ಕನಕರಡ್ಡಿ ಆದೇಶಿಸಿದ್ದಾರೆ.


ಆರೋಪಿಗೆ ನ್ಯಾಯಾಲಯವು ಅನೇಕ ಬಾರಿ ದಂಡ ಕಟ್ಟುವ ಶಿಕ್ಷೆ ನೀಡಿ ಹಾಗು ಹಲವು ಪ್ರಕರಣಗಳಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದರೂ ಸಹ ಜೈಲಿನಿಂದ ಹೊರಬಂದು ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿಕೊಂಡು ಮಟ್ಕಾ ಜೂಜಾಟ ಬುಕ್ಕಿ ದಂದೆಯನ್ನು ಮುಂದುವರೆಸುತ್ತಿದ್ದ ಹಾಗು ಗಡಿಪಾರು ವಿಚಾರಣೆ ನಡೆಯುತ್ತಿರುವ ಸಮಯದಲ್ಲೂ ಸಹ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಜಿಲ್ಲೆಯ ಠಾಣೆಗಳಲ್ಲಿ ಮತ್ತೆ ಹಲವಾರು ಪ್ರಕರಣಗಳು ಆರೋಪಿ ವಿಶ್ವನಾಥನ ಮೇಲೆ ದಾಖಲಾಗಿವೆ.

ದಿಟ್ಟ ಹೆಜ್ಜೆ ಇಟ್ಟ ಕೊಪ್ಪಳದ ಎ.ಸಿ. ನಾರಾಯಣ ರೆಡ್ಡಿ ಕನಕರೆಡ್ಡಿ.

AC ನಾರಾಯಣ ರೆಡ್ಡಿ

ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಸ್ವಾಸ್ಥ್ಯ ಹಾಳುಮಾಡುತ್ತಿದ್ದ ಅನೇಕ ವ್ಯಕ್ತಿಗಳನ್ನು ಗಡಿಪಾರು ಮಾಡುವ ಮೂಲಕ ಕೊಪ್ಪಳದ ಎ.ಸಿ. ನಾರಾಯಣರೆಡ್ಡಿ ಕನಕರೆಡ್ಡಿ ಯವರು ದಿಟ್ಟತನದ ಹೆಜ್ಜೆ ಇಟ್ಟು ಸಮಾಜ ಸ್ವಾಸ್ಥ್ಯ ಹಾಳುಮಾಡುವವರಿಗೆ ಸಿಂಹ ಸ್ವಪ್ನ ಆಗಿದ್ದಂತೂ ಸತ್ಯ. ಜಿಲ್ಲೆಯಲ್ಲಿ ಇನ್ನೂ ಅನೇಕ ಮಟ್ಕಾ ಬುಕ್ಕಿಗಳು ತೆರೆಮರೆಯಲ್ಲಿ ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿ ಜನಸಾಮಾನ್ಯರು ಜೂಜಾಟದ ದುರಾಸೆಗೆ ಬಿದ್ದು ಮನೆಮಠ ಕಳೆದುಕೊಳ್ಳುತ್ತಿದ್ದಾರೆ ಕೊಪ್ಪಳ ಪೋಲಿಸರು ಹಾಗು ಎಸಿ ನಾರಾಯಣ ಕನಕರಡ್ಡಿಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ದುಷ್ಟರನ್ನು ಹೆಡಿಮುರಿ ಕಟ್ಟಲಿ ಎನ್ನುವುದು ತುಂಗಾವಾಣಿ ಆಶಯ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಚಾಲಾಕಿ ಬೈಕ್ ಕಳ್ಳನ ಬಂಧನ.

ಚಾಲಾಕಿ ಬೈಕ್ ಕಳ್ಳನ ಬಂಧನ. ತುಂಗಾವಾಣಿ ಗಂಗಾವತಿ ಎ 04 ಗಂಗಾವತಿ ನಗರ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಮಾರ್ಚ್ …

error: Content is protected !!