ಮಗಳ ಸಾವು: ಅನುಮಾನ ವ್ಯಕ್ತಪಡಿದ ತಾಯಿ.
ಸಾವಿನ ಸತ್ಯ ಹೊರಬರಲಿ ಎಂದು ದೂರು ದಾಖಲು.!
ತುಂಗಾವಾಣಿ.
ಗಂಗಾವತಿ:ಅ-31 ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಿವಾಸಿ ರುಕ್ಮಿಣಿ ರಮೇಶ ನೆಕ್ಕುಂಟಿ (34) ಎನ್ನುವ ಮಹಿಳೆ ಅ-29 ರ ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ.
ಸುಮಾರು ಆರು ವರ್ಷಗಳ ಹಿಂದೆ ರಮೇಶ ನೆಕ್ಕುಂಟಿ ಇವರ ಜೊತೆಗೆ ಮದುವೆ ಮಾಡಿ ಕೊಡಲಾಗಿರುತ್ತೆ. ಎರಡು ವರ್ಷಗಳ ಹಿಂದೆ ಗಂಗಾವತಿ ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಲ್ಲಿ ವಾಸವಿದ್ದರು.
ಅ-29 ರ ಬೆಳಿಗ್ಗೆ 5 ಘಂಟೆ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಳಿಯ ರಮೇಶ ನೆಕ್ಕುಂಟಿ ಬೆಳಿಗ್ಗೆ 8 ಘಂಟೆಯ ಸುಮಾರಿಗೆ ತಾಯಿ ಬೋಡ ಲಕ್ಷ್ಮಿ ಮಹೆಬೂಬ ನಗರ (ತೆಲಂಗಾಣ) ಇವರಿಗೆ ಮಾಹಿತಿ ತಿಳಿಸುತ್ತಾರೆ. ಆದರೆ
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ. ಮಗಳ ಸಾವಿನ ನಿಜವಾದ ಕಾರಣ ತಿಳಿಯಬೇಕು ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಸತ್ಯ ಹೊರ ಬರಬೇಕೆಂದು ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.