ಗಂಗಾವತಿ: ಹಾಡು ಹಗಲೆ ಮನೆ ಕಳ್ಳತನ:ಚಿನ್ನಾಭರಣ ದೋಚಿದ ಕಳ್ಳರು.!
ತುಂಗಾವಾಣಿ.
ಗಂಗಾವತಿ: ಅ-27 ನಗರದಲ್ಲಿ ದಿನೆ ದಿನೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು. ಅ-21 ರ ಬೆಳಿಗ್ಗೆ 9-ರಿಂದ 11- ಸಮಯ ಅವಧಿಯಲ್ಲಿ ಬಸವಣ್ಣ ಸರ್ಕಲ್ ಬಳಿ ಹಾಡು ಹಗಲೆ ಮನೆ ಕಳ್ಳತನ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ.
ಜನನಿ ಬೀಡ ಪ್ರದೇಶವಾಗಿದ್ದರು ಸಹ ಕಳ್ಳರು ಹಾಡುಹಗಲೇ ಕಳ್ಳತನ ವಾಗಿದ್ದು ಸ್ಥಳಿಯರಲ್ಲಿ ಆತಂಕ ಮನೆ ಮಾಡಿದೆ.
ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಬಸಪ್ಪ ಕೇಣದವರು. ಮನೆ. ಯಾರು ಇಲ್ಲದ ಸಮಯ ನೋಡಿದ ಕಳ್ಳರು. ಮನೆಯ ಬಾಗಿಲದ ಕೊಂಡಿಯನ್ನು ಮುರಿದು ಒಳಗೆ ಪ್ರವೇಶಿಸಿ ಕಳ್ಳರು. ಅಲಮಾರದಲ್ಲಿಟ್ಟಿದ್ದ ನಾಲ್ಕು ತೊಲೆ (40) ಗ್ರಾಂ ಬಂಗಾರದ ಮಾಂಗಲ್ಯ ಸರ ಸುಮಾರು 1ಲಕ್ಷ 25 ಸಾವಿರ ಬೆಲೆ ಬಾಳುವ ಆಭರಣ ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಅ-26 ರಂದು
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ಮಾಡಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.