ನಗರದಲ್ಲಿ ಹೆಚ್ಚಾದ ಹಗಲು ಕಳ್ಳರು.!
ಗಂಗಾವತಿ ನಗರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ.!
ತುಂಗಾವಾಣಿ.
ಗಂಗಾವತಿ: ಅ-13 ನಗರದ ಪ್ರಮುಖ ವೃತ್ತದಲ್ಲಿ ಹಾಡು ಹಗಲೆ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇವೆ.
ಮೂಲತಃ ಜೀರಾಳ ಕಲ್ಗುಡಿ ಕ್ಯಾಂಪ್ ಗ್ರಾಮದ ಕೆ.ಹನುಮಂತಪ್ಪ ರವರು ಅ-11ರಂದು
ಗಂಗಾವತಿ ನಗರದ ಸಿ.ಬಿ.ಎಸ್.ವೃತ್ತದ ಬಳಿ ಬರುವ RDCC ಬ್ಯಾಂಕ್ ನಲ್ಲಿಟ್ಟಿದ್ದ ₹-81000/ ಠೇವಣಿ ಹಣವನ್ನು ಮತ್ತು ತನ್ನ ಮಗನ ಅಕೌಂಟ್ ನಲ್ಲಿದ್ದ ₹-57000/ ಹಣ ಒಟ್ಟು ₹-1.38.000 ಡ್ರಾ ಮಾಡಿಕೊಂಡು ತನ್ನ ಸೈನ್ ಬೈಕ್‌ನ ಸೈಡ್ ಬ್ಯಾಗ್ ನಲ್ಲಿಟ್ಟು ಕಿರಾಣಿ ಅಂಗಡಿಯಲ್ಲಿ ಸಕ್ಕರೆ ತರಲು ಹೋದಗ. ಚಾಲಾಕಿ ಕಳ್ಳರು ಕಳ್ಳತನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇನ್ನೊಂದು ಇದೇ ರೀತಿಯ ಪ್ರಕರಣ. ಹಂಪಸದುರ್ಗ ಗ್ರಾಮದ ವಿರೇಶಪ್ಪ ಭತ್ತದ ಎಂಬ ವ್ಯಕ್ತಿ ನಗರದ ಎಕ್ಷಿಸ್ ಬ್ಯಾಂಕಿನಲ್ಲಿ ₹-2.10.000/ ಹಣ ಡ್ರಾ ಮಾಡಿಕೊಂಡು ತಾವು ತಂದಿದ್ದ ಶೈನ್ ಬೈಕ್‌ನ ಸೈಡ್ ಬಾಕ್ಸ್‌ನಲ್ಲಿಟ್ಟು ಕನಕದುರ್ಗ ಟಾಕೀಸ್ ಪಕ್ಕದಲ್ಲಿರುವ ಶೇಂಗಾ ಮಿಲ್ ಬಳಿ ಬಂದು. ಮಿಲ್ ಒಳಗೆ ಹೋಗಿ ಕೇವಲ ಹತ್ತು ನಿಮಿಷಗಳ ಕಾಲ ಅವಧಿಯಲ್ಲಿ ಸೈಡ್ ಬಾಕ್ಸ್ ನಲ್ಲಿಟ್ಟಿದ್ದ ಹಣವನ್ನು ಬಾಕ್ಸ್ ಹೊಡೆದು ಹಣ ಎಗ್ಗರಿಸಿರುವ ಅಚ್ಚರಿ ಘಟನೆ ನಗರದಲ್ಲಿ ನಡೆದಿದೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.
ಗಂಗಾವತಿ ನಗರಕ್ಕೆ ಬೇಕಿದೆ CC.TV ಕ್ಯಾಮೆರಾ.
ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ಹಾಡು ಹಗಲೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಗರದ ಪ್ರಮುಖ ರಸ್ತೆಯಲ್ಲಿ ಸಿ.ಸಿ.ಟಿ.ವಿ. ಅಳವಡಿಸುವಲ್ಲಿ ಹಿಂಜರಿತಿದ್ದು ಅನುಮಾನಕ್ಕೆ ಎಡೆ ಮಾಡಿದೆ. ತುಂಗಾವಾಣಿ ಪತ್ರಿಕೆ ಇದರ ಬಗ್ಗೆ ಸಾಕಷ್ಟು ವರದಿ ಬಿತ್ತರಿಸಿತ್ತು ಆದರೂ ಚುನಾಯಿತರು ಮತ್ತು ಅಧಿಕಾರಿಗಳು ಅದರ ಗೋಜಿಗೆ ಹೋಗುವ ಮನಸ್ಸು ಮಾಡುತ್ತಿಲ್ಲ ಎನ್ನುವುದೆ ವಿಪರ್ಯಾಸ. ಗಂಗಾವತಿ ನಗರಕ್ಕೆ ಬರುವ ಜನತೆ. ಕಳ್ಳರ ಕಪಿಮುಷ್ಠಿಯಿಂದ ಹೇಗಪ್ಪ ಪಾರಾಗೊದು ಎಂದು ಕೈಕೈ ಹಿಚಿಗಿಕೊಳ್ಳುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚತ್ತು ಕೊಳ್ತಾರಾ ಕಾದು ನೋಡ ಬೇಕಿದೆ.?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.