ಮನಿಯಾರ್ ಹಾಗು ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿದಂತೆ ಐದು ಜನರ ಮೇಲೆ ದೂರು ದಾಖಲು.!
ತುಂಗಾವಾಣಿ.
ಗಂಗಾವತಿ: ಅ-2 ತಾಲೂಕಿನ ಕೆಸರಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ವೆಂಕಟಗಿರಿ ಹೋಬಳಿಯ ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ ಯವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://youtube.com/shorts/6RliorlNH94?feature=share
ಅ-1 ರಾತ್ರಿ ನಡೆದ “ಅನ್ಸಾರಿ ನಡಿಗೆ ಜನರ ಆಶೀರ್ವಾದದ ಕಡೆಗೆ ” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಹಾಗು ಕೆಲ ಮಾದ್ಯಮದವರ ವಿರುದ್ಧ ಗುಡುಗಿದ್ದರು. ಆದರೆ ಕಾರ್ಯಕ್ರಮ ಆಯೋಜಿಸಿದ ಐವರು.
ಸ್ಥಳೀಯ ಜನರನ್ನು ಗುಂಪು ಕೂಡಿಸಿ ಮತ್ತು ಮೆರವಣಿಗೆ. ಸಿಡಿಮದ್ದು. ಪಟಾಕಿ ಸಿಡಿಸುತ್ತಾ ರಾಜ್ಯ ಸರ್ಕಾರದ ಹಾಗು ಜಿಲ್ಲಾಡಳಿತದ ಮಾರ್ಗ ಸೂಚಿ ನಿಯಮ ಪಾಲಿಸಿರುವುದಿಲ್ಲ. ಸಾಮಾಜಿಕ ಅಂತರ ಕಾಪಾಡದೆ ಸೊಂಕು ಹರಡುವಿಕೆ ಸಂಭವವಿರುವುದೆಂದು ತಿಳಿದಿದ್ದರೂ ಸಹ ಕಾರ್ಯಕ್ರಮ ಆಯೋಜಿಸಿದ್ದು ಕೊವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಿಸಿದ
1 ] ಶಾಮೀದ ಮಾನಿಯರ್ ಅಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಗಂಗಾವತಿ ಘಟಕ ಹಾಗೂ ಕೆಸರಹಟ್ಟಿ 2 ] ಬಸವರಾಜ ತಂದೆ ಲಿಂಗರೆಡ್ಡೆಪ್ಪ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೆಸರಹಟ್ಟಿ.
3 ] ವಿಶ್ವನಾಥ ತಂದೆ ಶೇಖರ್ ಗೌಡ ಮಾಲಿಪಾಟೀಲ್ ಸಾ : ಕೆಸರಹಟ್ಟಿ 4 ] ಬಸವರಾಜ ತಂದೆ ಶೇಖರಪ್ಪ ಜೇಕಿನ್ ಸಾ : ಕೆಸರಹಟ್ಟಿ 5 ] ದೇವರಾಜ ತಂದೆ ಯಲ್ಲಪ್ಪ ನಾಯಕ ಸಾ : ಕೆಸರಹಟ್ಟಿ ಸೇರಿದಂತೆ ಒಟ್ಟು ಐದು ಜನರು ಮೇಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಆದರೆ ಇದುವರೆಗೂ ಯಾರ ಬಂಧನವಾಗಿಲ್ಲ ಎಂಬ ಮಾಹಿತಿ ದೊರೆತಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.