ಕನಕಗಿರಿ: ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಗಂಗಾಧರ ಸ್ವಾಮಿ ಆಯ್ಕೆ ಬಹುತೇಕ ಖಚಿತ.
ಪಕ್ಷದ ಕಾರ್ಯಕರ್ತರಿಗೆ ಏನ್ ಹೇಳಿದ್ರು ರೆಡ್ಡಿ ಶ್ರೀನಿವಾಸ.!
ತುಂಗಾವಾಣಿ.
ಕನಕಗಿರಿ: ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರೆಡ್ಡಿಶ್ರೀನಿವಾಸ ಅವರ ಮೂರು ಅವಧಿ ಪೂರೈಸಿ ನಾಲ್ಕನೇ ಅವಧಿಗೆ ಗಂಗಾಧರ ಸ್ವಾಮಿಯವರನ್ನು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ರೆಡ್ಡಿ ಶ್ರೀನಿವಾಸ ಮಾತನಾಡಿ. ಪಕ್ಷ ನನ್ನ ಸಂಘಟನೆ ಹಾಗೂ ನಾನು ಮಾಡಿದ ಸೇವೆಯನ್ನು ಗುರುತಿಸಿ ನನಗೆ ಮೂರು ಅವಧಿಗಳ ವರೆಗೆ 10 ವರ್ಷಗಳ ಕಾಲ ನನಗೆ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿತ್ತು. ಪಕ್ಷಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಮತ್ತು ನನಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಎಂಬ ತೃಪ್ತಿ ನನಗೆ ಇದೆ. ಇನ್ನು ನಮ್ಮ ನಾಯಕರಾದ ಶಿವರಾಜ ತಂಗಡಗಿ ಹಾಗೂ ಪಕ್ಷದ ಹಿರಿಯ ಮುಖಂಡರು ಸೇರಿ ನೂತನ ಅಧ್ಯಕ್ಷರಾಗಿ ಗಂಗಾಧರ ಸ್ವಾಮಿ ಅವರನ್ನು ಆಯ್ಕೆ ಮಾಡಿರುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಡಿಕೆ ಶಿವಕುಮಾರ್ ಅವರು ಇನ್ನೆರಡು ದಿನದಲ್ಲಿ ಆದೇಶ ಪತ್ರ ನೀಡಲಿದ್ದಾರೆ.
ಇನ್ನು ನಾನು ಮುಂದಿನ ದಿನಗಳಲ್ಲಿ ಗಂಗಾಧರ ಸ್ವಾಮಿ ಅವರ ಜೊತೆಗೂಡಿ ಪಕ್ಷ ಸಂಘಟನೆ ಮಾಡಿ ಸನ್ಮಾನ್ಯ ಶಿವರಾಜ ತಂಗಡಗಿ ಅವರ ಕೈ ಬಲಪಡಿಸುತ್ತೇವೆ ಎಂದು ತಿಳಿಸಲು ಬಯಸುತ್ತೆನೆ. ಎಂದು ತಮ್ಮ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.