ರಾಡ್ ನಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ ಗಂಡ.!
ತುಂಗಾವಾಣಿ.
ಕುಷ್ಟಗಿ: ಎ-1 ತಾಲ್ಲೂಕಿನ ತಾವರಗೇರ ಪಟ್ಟಣದಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ತಾವರಗೇರ ಪಟ್ಟಣದ ಬಸವಣ್ಣಕ್ಯಾಂಪ್ ಸರ್ಕಾರಿ ಭವನದಲ್ಲೇ ಗಂಡನಿಂದಲೇ ಹತಳಾದ ಗೀತಾ ಮಹಾಂತೇಶ ಗೌಳಿ (38) ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ
ತಡರಾತ್ರಿಯಿಂದಲೇ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು. ಕೊಲೆಯಲ್ಲಿ ಅಂತ್ಯವಾಗಿದೆ, ಮೃತಳಿಗೆ ಒಂದು ಗಂಡು ಮೂರು ಹೆಣ್ಣುಮಕ್ಕಳಿವೆ, ಪತಿ
ಮಹಾಂತೇಶ ಗೌಳಿ ಯನ್ನು ವಶಕ್ಕೆ ಪಡೆದ ತಾವರಗೇರ ಪೋಲಿಸರು ತನಿಖೆ ಕೈಗೊಂಡಿದ್ದಾರೆ,
ಘಟನಾ ಸ್ಥಳಕ್ಕೆ ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಆರ್ ಉಜ್ಜಿನಕೊಪ್ಪ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.