ಕೊಪ್ಪಳ: ಇಲ್ಲೋಬ್ಬ ಸಾಹುಕಾರನ ಮೇಲೆ ಅತ್ಯಾಚಾರ ಕೇಸ್ ದಾಖಲಾಗಿದೆ.!
ತುಂಗಾವಾಣಿ.
ಕೊಪ್ಪಳ: ಮಾ-31 ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶೇಖರಪ್ಪ ಯಮನಪ್ಪ ಸಾಹುಕಾರ ಅಲಿಯಾಸ್ ಸೂಡಿ ಎಂಬ ವ್ಯಕ್ತಿಯ ಮೇಲೆ ಅತ್ಯಾಚಾರ ಹಾಗು ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಇದು ನಡೆದಿರುವುದು ಕುಷ್ಟಗಿ ತಾಲ್ಲೂಕಿನ ಹಿರೇ ಮನ್ನಾಪುರ ಗ್ರಾಮದ ಭೀಮಮ್ಮ ಗಂಡ. ಬಾಲಪ್ಪ ಉಣಚಗೇರಿ ಎಂಬ ಮಹಿಳೆ ಅತ್ಯಾಚಾರ ಹಾಗು ಜಾತಿನಿಂದನೆ ಮಾಡಲಾಗಿದೆ ಎಂದು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ:
ಭೀಮಮ್ಮನ ಗಂಡ ನಿಧನ ಹೊಂದಿದ್ದ ಕಾರಣ ತಮ್ಮ ತವರು ಮನೆಯಾದ ಹಿರೇ ಮನ್ನಾಪುರ ಗ್ರಾಮದಲ್ಲಿ ನೆಲೆಸಿದ್ದರು, ಅದೇ ಗ್ರಾಮದ ಶೇಖರಪ್ಪ ಸಾಹುಕಾರ ಎಂಬ ವ್ಯಕ್ತಿ, ಭೀಮಮ್ಮನನ್ನು ಪರಿಚಯ ಮಾಡಿಕೊಂಡು ಅತೀ ಸಲುಗೆಯಿಂದ ವರ್ತಿಸ ತೊಡಗುತ್ತಾನೆ, ನಿನ್ನನ್ನು ಪ್ರೀತಿಸುವೆ ಮದುವೆಯಾಗುವೆ ಎಂದು ಬಲಾತ್ಕಾರ ಮಾಡಿ ಸಂಭೋಗ ಮಾಡಿದ ನಂತರ, ಸಾಹುಕಾರ ಕಾರವಾರದ ಶಿವಾಜಿನಗರಕ್ಕೆ ಆ ಮಹಿಳೆಯನ್ನು ಕರೆದುಕೊಂಡು ಹೋಗಿ ಒಂದು ವರ್ಷ ಸತತ ಬಲಾತ್ಕಾರ ಮಾಡಿ ಮತ್ತೆ ವಾಪಸ್ಸು ತಮ್ಮ ಹಿರೇ ಮನ್ನಾಪುರ ಗ್ರಾಮಕ್ಕೆ ಕರೆದುಕೊಂಡು ಬಂದು ಸುಮಾರು 5-6 ವರ್ಷಗಳಿಂದಲೂ ಆ ಮಹಿಳೆ ಜೊತೆಗೆ ಇದ್ದು, ಈಗ 3-4 ತಿಂಗಳುಗಳ ನಂತರ ಬೇರೆ ಮಹಿಳೆಯ ಜೊತೆಗೆ ಸಂಬಧ ಹೊಂದಿದ್ದು, ಭೀಮಮ್ಮಳನ್ನು ಮದುವೆಯಾಗಲು ನಿರಾಕರಿಸಿದ್ದು, ನನ್ನ ಜೊತೆಗೆ ಹಟ ಸಂಭೋಗ ಮಾಡಿ ಮದುವೆಯೂ ಆಗದೆ, ನಿನ್ನನ್ನು ಕೆಲವೇ ಗಂಟೆಯಲ್ಲಿ ಮುಗಿಸುತ್ತೆನೆ, ಊರು ಬಿಡಿಸುತ್ತೆನೆ ಎನ್ನುತ್ತಾ ಜಾತಿ ನಿಂದನೆಯು ಸಹ ಮಾಡಿ,
ಎಂಟು ಜನರನ್ನು ಕರೆದುಕೊಂಡು ಬಂದು ಹಲ್ಲೇ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಕಲಂ 376,143,147,448,504,506,354,323 ಸಹಿತ 149 ಐಪಿಸಿ ಮತ್ತು 3 ( 1 ) ( c ). 3 (1) (s), 3 (1) (w) , 3 (2) ( va ) SC / ST ACT 2015 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.