ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ.
ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ.
ತುಂಗಾವಾಣಿ
ಯಲಬುರ್ಗಾ ನ 28 ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ಪತಿ ಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದ ಘಟನೆ ನಡೆದಿದೆ.
ರೇಣುಕಾ (32) ತನ್ನ ಸ್ವಂತ ಪತಿಯಿಂದ ಹತಳಾದ ದುರ್ದೈವೆ.
ಪತಿ ಯಲ್ಲಪ್ಪ ದ್ಯಾಂಪುರ ಹಾಗು ಪತ್ನಿ ರೇಣುಕಾ ಕೆಲವು ತಿಂಗಳ ಹಿಂದೆ ಮನೆಯಲ್ಲಿ ಜಗಳವಾಡಿಕೊಂಡಿದ್ದರು ಪತಿ ಕಿರಿಕಿರಿಗೆ ಬೇಸತ್ತು ಪತ್ನಿ ರೇಣುಕಾ ತನ್ನ ತವರುಮನೆಗೆ ಮರಳಿ ತಾಯಿ ಜೊತೆ ವಾಸಮಾಡುತ್ತಿದ್ದಳು ನಿನ್ನೆ ಗಂಡನ ಅಣ್ಣ ಮಂಗಳಪ್ಪ ಮತ್ತು ಅತ್ತಿಗೆ ಹಾಗು ಇತರರು ಸೇರಿ ರೇಣುಕಾಳನ್ನು ತವರುಮನೆಯಿಂದ ಕರೆತಂದು ಇಬ್ಬರಿಗೂ ಬುದ್ದಿವಾದ ಹೇಳಿ ಗಂಡನ ಮನೆಯಲ್ಲಿ ಬಿಟ್ಟು ಹೋಗಿದ್ದರು.
ಆದರೆ ಇಂದು ಮತ್ತೆ ದಂಪತಿಗಳಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಸಿಟ್ಟಿಗೆದ್ದ ಯಲ್ಲಪ್ಪ ಹೆಂಡತಿ ರೇಣುಕಾಳನ್ನು ಕೊಂಡು ರುಂಡ ಮುಂಡ ಬೇರ್ಪಡಿಸಿದ್ದಾನೆ. ಕೊಲೆಗೆ ನೈಜ ಕಾರಣ ಪೋಲಿಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಇವರಿಗೆ ಮೂವರು ಮಕ್ಕಳು ಇವೆ.
ಸ್ಥಳಕ್ಕೆ ಕೊಪ್ಪಳ ಪೋಲಿಸ್ ವರಿಷ್ಠಾಧಿಕಾರಿ ಶ್ರೀಧರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.