ಕೊಪ್ಪಳ: ಜಿ.ಪಂ. ಅವಿಶ್ವಾಸ ನಿರ್ಣಯಕ್ಕೆ ಮುಹೂರ್ತ.
ತುಂಗಾವಾಣಿ
ಕೊಪ್ಪಳ ಸೆ 25 ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ದಿನಾಂಕ ನಿಗದಿಯಾಗಿದ್ದು ಇದೇ ಅಕ್ಟೋಬರ್ 3 ರಂದು ಸಂಜೆ ನಾಲ್ಕು ಗಂಟೆಗೆ ಜಿಲ್ಲಾಧಿಕಾರಿಗಳವರ ಕಛೇರಿಯಲ್ಲಿರುವ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಹಾಜರಾಗಲು ಕಲಬುರಗಿ ಪ್ರಾದೇಶಿಕ ಆಯುಕ್ತರು ಜಿಲ್ಲಾ ಪಂ ಸರ್ವ ಸದಸ್ಯರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
29 ಜನ ಸದಸ್ಯ ಬಲ ಹೊಂದಿರುವ ಕೊಪ್ಪಳ ಜಿಲ್ಲಾ ಪಂಚಾಯತ್ ನಲ್ಲಿ 17 ಕಾಂಗ್ರೆಸ್ 11 ಬಿಜೆಪಿ ಹಾಗು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷವು ಆಡಳಿತ ಹೊಂದಿದ್ದು ಅಧ್ಯಕ್ಷ ವಿಶ್ವನಾಥ ರಡ್ಡಿಯ ಮೇಲೆ ಮುನಿಸು ಹೊಂದಿರುವ ಕಾಂಗ್ರೆಸ್ ಸದಸ್ಯರು ಬಿಜೆಪಿಯ ಸದಸ್ಯರ ಬೆಂಬಲದೊಂದಿಗೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿನಂತಿಸಿದ್ದರು ಅದರಂತೆ ಪ್ರಾದೇಶಿಕ ಆಯುಕ್ತರು ಸಭೆ ಸೂಚನಾ ಪತ್ರ ಜಾರಿ ಮಾಡಿ ಅವಿಶ್ವಾಸಕ್ಕೆ ಮಹೂರ್ತ ಫಿಕ್ಸ್ ಮಾಡಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.