ಗಂಗಾವತಿ ಸ್ವಾಮಿ ಪ್ರಸ್ತಾವನೆಗೆ ಕರಡಿ ಪ್ರಸ್ತಾಪ..!
ತುಂಗಾವಾಣಿ.
ಕೊಪ್ಪಳ: ಸೆ-17 ಜಿಲ್ಲೆಯ ಗಂಗಾವತಿ-ದರೋಜಿ ರೇಲ್ವೆ ಮಾರ್ಗ ರಚನೆಯ ಬಗ್ಗೆ ಅನೇಕ ಸಚಿವರಿಗೆ ಶಾಸಕರಿಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲು ಅಶೋಕಸ್ವಾಮಿ ಸಲ್ಲಿಸಿದ ಪ್ರಸ್ತಾವನೆಗೆ ಸಂಸದ ಕರಡಿ ಸಂಗಣ್ಣ ಪ್ರಸ್ತಾಪಿಸಿದರು.
ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಯ ಬಗ್ಗೆ ಕೊಪ್ಪಳದ ಸಂಸದ ಸಂಗಣ್ಣ ಕರಡಿ ಬುಧುವಾರ ಲೋಕಸಭೆಯ ಆದಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸದನದ ಗಮನ ಸೆಳೆದರು.
ಗಂಗಾವತಿ ರೈಲ್ವೇ ನಿಲ್ದಾಣದಿಂದ ಅಂದಾಜು ಕೇವಲ ಮೂವತ್ತೈದು ಕಿ.ಮಿ.ಅಂತರವಿರುವ ಬಳ್ಳಾರಿ ಜಿಲ್ಲೆಯ ದರೋಜಿ ರೇಲ್ವೆ ನಿಲ್ದಾಣಕ್ಕೆ ರೇಲ್ವೆ ಲೈನ್ ಸಂಪರ್ಕ ಮಾಡುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರಲ್ಲದೆ ಗಂಗಾವತಿ ತಾಲೂಕಿನಲ್ಲಿ ಬೆಳೆಯುವ ಭತ್ತಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆ ಇದ್ದು, ಸಾಕಷ್ಟು ಅಕ್ಕಿ ಗಿರಣಿಗಳು ಅಕ್ಕಿ ವಹಿವಾಟಕ್ಕೆ ಸ್ಥಳೀಯ ಸರಕು ಸಾಗಣೆಗಳನ್ನು ಅವಲಂಬಿಸಿವೆ, ಈ ರೇಲ್ವೆ ಲೈನ್ ಸಂಪರ್ಕದಿಂದ ವಾಣಿಜ್ಯೊದ್ಯಮಕ್ಕೆ ಪ್ರೊತ್ಸಾಹ ಸಿಗುತ್ತದೆ ಎಂದು ಹೇಳಿದರು.
https://m.facebook.com/story.php?story_fbid=2661391034126709&id=100007675154053
ಹನುಮ ಜನಿಸಿದ ನಾಡು ಆಂಜನಾದ್ರಿ ಹಾಗೂ ಆನೆಗುಂದಿ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿದ್ದು, ದರೋಜಿಯಲ್ಲಿ ಕರಡಿದಾಮ ಹಾಗೂ ಮತ್ತಿತರ ಪ್ರವಾಸಿ ತಾಣಗಳಿವೆ. ಈ ನೂತನ ರೇಲ್ವೆ ಲೈನ್ ರಚನೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿ ಈ ಹೊಸ ರೇಲ್ವೆ ಲೈನ್ ಮಾರ್ಗಕ್ಕೆ ಮಂಜೂರಾತಿ ನೀಡಬೇಕೆಂದು ಸದನದ ಮೂಲಕ ರೇಲ್ವೆ ಸಚಿವರನ್ನು ಅವರು ಕೋರಿದರು.
ಕರಡಿ ಸಂಗಣ್ಣನವರು ಸದನದಲ್ಲಿ ಮಾತನಾಡಿದ ವಿಡಿಯೋ ಸಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಜನ ಸಾಮಾನ್ಯರು ಅಶೋಕಸ್ವಾಮಿ ಹಾಗು ಸಂಸದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಡು ಬಂತು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವ ಶ್ರೀರಾಮುಲು,ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಡೆಸ್ಗೂರು,ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮುಂತಾದವರು, ಸಂಸದ ಸಂಗಣ್ಣನವರು ಸೇರಿದಂತೆ ರೇಲ್ವೆ ಸಚಿವಾಲಯಕ್ಕೆ ಪತ್ರ ಬರೆದು ಗಂಗಾವತಿ-ದರೋಜಿ ರೇಲ್ವೆ ಲೈನ್ ರಚನೆಗೆ ಒತ್ತಾಯಿಸಿದ್ದರು.
,ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ,ಹಲವು ಸಂಘ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದ್ದರು ಹಾಗೆಯೇ ಅವರೆಲ್ಲರೂ ಪತ್ರವ್ಯವಹಾರ ಮಾಡಿದ ಸಲುವಾಗಿ ಇಂದು ಸಂಸತ್ತಿನಲ್ಲಿ ಪ್ರಸ್ತಾಪ ವಾಗಿದೆ, ಪ್ರಸ್ತಾಪಿಸಿದ ಸಂಸದ ಕರಡಿಯವರಿಗೆ ಕೃತಜ್ಞತೆಗಳನ್ನು ತಿಳಿಸಿ,ಈ ಯೋಜನೆಯ ಸರ್ವೇ ಕಾರ್ಯಕ್ಕೆ ಮತ್ತು ಕಾಮಗಾರಿಗೆ ತೀವ್ರಗತಿಯಲ್ಲಿ ಕಾಮಗಾರಿಗೆ ಚಾಲನೆ ಸಿಗಲಿ ಎಂದು ತಿಳಿಸಿದರು.
ಅಶೋಕಸ್ವಾಮಿ ಹೇರೂರುರವರಿಗೆ ಗಂಗಾವತಿ ಜನತೆಯ ಪರವಾಗಿ ತುಂಗಾವಾಣಿ ಬಳಗ ಧನ್ಯವಾದಗಳು ಸಲ್ಲಿಸುತ್ತಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
ವಿಶೇಷ ಸೂಚನೆ:
ತುಂಗಾವಾಣಿ ಪತ್ರಿಕೆ ಎಂದು ಹೇಳಿಕೊಂಡು ಯಾರಾದರೂ ಬಂದರೆ ಕೂಡಲೇ ಈ ನಂಬರ್ ಗೆ ಮಾಹಿತಿ ನೀಡಿ.
ಮೊ: 9164449191