Breaking News

ತುಂಗಭದ್ರಾ ನೀರಾವರಿ ಇಲಾಖೆಯ ಕರ್ಮ ಕಾಂಡ..! ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ್ರಾ ಮಂಜಪ್ಪ..!?

ತುಂಗಭದ್ರಾ ನೀರಾವರಿ ಇಲಾಖೆಯ ಕರ್ಮ ಕಾಂಡ..!
ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ್ರಾ ಮಂಜಪ್ಪ..!?


ತುಂಗಾವಾಣಿ.
ಕೊಪ್ಪಳ: ಆ,10 ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ತುಂಗಭದ್ರಾ ಜಲಾಶಯದ ಕಡೆಬಾಗಿಲು ಕೊರಮ್ಮಕ್ಯಾಂಪ್ ಭಾಗದ ವಿಜಯನಗರ ಕಾಲುವೆ ಒಡೆದು ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆಗಳಿಗೆ ನೀರು ಹರಿದಿರುವುದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ, ನೂರಾರು ಎಕರೆ ಸಾಕಷ್ಟು ಕರ್ಚು ಮಾಡಿ ಭತ್ತದ ಸಸಿಗಳನ್ನು ನಾಟಿ ಮಾಡಿದ ರೈತರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ,
ಆರ್,ಎನ್,ಎಸ್, ಕಂಪನಿ ಯಿಂದ ಮೋಸ..!


ಹೌದು ಈ ಆರ್,ಎನ್,ಎಸ್,ಕಂಪನಿಯು ಕೋಟ್ಯಾಂತರ ರೂಪಾಯಿಗಳ ಕಾಮಗಾರಿ ನಿರ್ವಹಿಸಿತ್ತು, ಈ ಕಾಮಗಾರಿ ಸಣ್ಣ ಮಳೆಯಿಂದ ಮೊನ್ನೆ ತಾನೆ ಒಡೆದು ಹೊಗಿತ್ತು, ಈಗ ಮತ್ತೆ ಒಡೆದಿದೆ ಎಂದರೆ. ಅರ್ಥೈಸಿಕೊಳ್ಳಿ,
ಇದು ಅವೈಜ್ಞಾನಿಕ ಕಾಮಗಾರಿ ಕಳಪೆ ಕಾಮಗಾರಿ ಯಾಕೆಂದರೆ ಈ ಮೊದಲು ಹದಿನೈದು ಅಡಿಗೂ ಹೆಚ್ಚು ಆಳ ಹಾಗು ಅಗಲವಾದ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿತ್ತು ಆದರೆ ಈಗ ಕೇವಲ ಐದು ಆರು ಅಡಿ ಆಳ ಮಾಡಿ ನಿರ್ಮಾಣ ಮಾಡುತ್ತಿರುವುದು ನೋಡಿದರೆ ಗೊತ್ತಾಗುತ್ತೆ ಇದು ಎಷ್ಟು ಅವೈಜ್ಞಾನಿಕ ವಾಗಿದೆ ಎಂದು ಗೊತ್ತಾಗುತ್ತದೆ,

ಈ ಕಾಲುವೆ ಗೆ ನೀರು ತುಂಗಭದ್ರಾ ನದಿಯ ನೀರು ಬರುತ್ತೆ ಇಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ನೀರು ಇರುತ್ತಿತ್ತು ಇನ್ಮೂಂದೆ ಅದು ಕನಸಾಗು ಎಲ್ಲಾ ಲಕ್ಷಣಗಳು ಕಾಣುತ್ತಿವೆ, ಏಕೆಂದರೆ ಇ ಕಾಮಗಾರಿಯೆ ಅವೈಜ್ಞಾನಿಕ ಕಾಮಗಾರಿ ಯಾಗಿದೆ..!

ಇತ್ತೀಚೆಗೆ ಕೊಪ್ಪಳ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಇದು ಅವೈಜ್ಞಾನಿಕ ಕಾಮಗಾರಿ ಮತ್ತು ಕಳಪೆ ಮಟ್ಟದ ಕಾಮಗಾರಿ ಎಂದು ಗಂಭೀರ ಆರೋಪ ಮಾಡಿದ್ದರು, ಅದು ನಿಜವಾಯ್ತು, ಅತ್ಯಂತ ಕಳಪೆ ಕಾಮಗಾರಿಯಾಗಿದೆ ಅದನ್ನು ಆದಷ್ಟು ಬೇಗನೆ ಗುತ್ತಿಗೆದಾರರಿಗೆ ಸೂಚಿಸಿ ಕ್ರಮ ವಹಿಸಿ ಎಂದು ತಂಗಡಗಿ ಆಗ್ರಹಿಸಿದ್ದರು..!

ಕಳಪೆ ಕಾಮಗಾರಿಗೆ ಕುಮ್ಮಕ್ಕು ನೀಡಿದ್ರಾ ಮಂಜಪ್ಪ..!?
ಯಾರಿ ಮಂಜಪ್ಪ ಅಂತಿರಾ..?
ತುಂಗಭದ್ರಾ ಜಲಾಶಯದ ಮುಖ್ಯ ಇಂಜಿನಿಯರ್ ಮಂಜಪ್ಪ ಈ ಮಂಜಪ್ಪ ಗೆ ಎಷ್ಟೋ ಜನ ರೈತರು ಸಂಘ ಸಂಸ್ಥೆಗಳು ರಾಜಕಾರಣಿಗಳು ದೂರು ಸಲ್ಲಿಸಿದ್ದರು ಅದನ್ನ ಕಸದ ಪುಟ್ಟಿಗೆ ಹಾಕಿ ಇ ಆಸಾಮಿ, ಆರ್,ಎನ್,ಎಸ್, ಕಂಪನಿಯ ಗುತ್ತಿಗೆದಾರರೊಂದಿಗೆ ಶ್ಯಾಮೀಲಾಗಿದ್ದಾರೆ..!?
ಇದೊಂದು ಸರಕಾರಿ ಹಣವನ್ನು ಲೂಟಿ ಮಾಡುವ ಕಾಮಗಾರಿ ಎಂದು ರೈತರ ಆಕ್ರೋಶದ ನುಡಿಗಳು, ಮೊನ್ನೆ ತಾನೆ ನಿರ್ಮಾಣ ಮಾಡಿದ ಕಾಮಗಾರಿ ಇಷ್ಟು ಬೇಗನೆ ಕಿತ್ತು ಹೊಗುತ್ತೆ ಎಂದರೆ ಯಾವ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ, ಈ ಲೂಟಿ ಗ್ಯಾಂಗ್ ನ ವಿರುದ್ಧ ಸರ್ಕಾರ ಯಾವ ರೀತಿ ಕ್ರಮಗಳನ್ನು ಕೈಗೊಳ್ಳತ್ತೆ ಕಾದು ನೋಡಬೇಕಿದೆ..!? ತುಂಗಭದ್ರಾ ಇಂಜಿನಿಯರ್ ಗಳ ಹಗರಣಗಳು ಸರಣಿ ಲೇಖನ ಬರಲಿದೆ ಕಾದು ನೋಡಿ..!?

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ವಿಷ ಸರ್ಪ ಕಚ್ಚಿ ಅಣ್ಣ ತಮ್ಮಂದಿರ ಸಾವು..!

ವಿಷ ಸರ್ಪ ಕಚ್ಚಿ ಅಣ್ಣ ತಮ್ಮಂದಿರ ಸಾವು..! ತುಂಗಾವಾಣಿ. ಕೊಪ್ಪಳ:ಆ,5, ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ರಂಗಾಪುರ ಗ್ರಾಮದ ನಿವಾಸಿ ಹನುಮಪ್ಪ …