Breaking News

ರೈತರಿಗೆ ಮೋಸ ಮಾಡುತ್ತಿರುವ ಗೊಬ್ಬರದ ಅಂಗಡಿ ಮಾಲೀಕರು. ಕೃಷಿ ಇಲಾಖೆ ಸಾಥ್..!?

ರೈತರಿಗೆ ಮೋಸ ಮಾಡುತ್ತಿರುವ ಗೊಬ್ಬರದ ಅಂಗಡಿ ಮಾಲೀಕರು.
ಕೃಷಿ ಇಲಾಖೆ ಸಾಥ್..!?


ತುಂಗಾವಾಣಿ.
ಕೊಪ್ಪಳ: ಆ18, ಜಿಲ್ಲೆಯ ಗಂಗಾವತಿ ನಗರದ ಸಹಾಯಕ ಕೃಷಿ ನಿರ್ದೇಶಕ ಇಲಾಖೆಯ ಎದುರು ಇಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಯಿತು ಗ್ರಾಮೀಣ ಭಾಗದಲ್ಲಿ ಮತ್ತು ಪಟ್ಟಣ ಭಾಗದಲ್ಲಿ ಗೊಬ್ಬರದ ಅಂಗಡಿ ಮಾಲೀಕರು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ 150ರಿಂದ ಎರಡು ನೂರು ರೂಪಾಯಿಗೂ ಹೆಚ್ಚಿನ ದುಡ್ಡು ತಗೆದುಕೊಳ್ಳುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಆರೋಪ ಮಾಡಿ ಮಾತನಾಡಿದ ಅವರು ಯೂರಿಯಾ ಗೊಬ್ಬರ ತಗೊಳ್ಳಲು ಹೋದ ರೈತರಿಗೆ ಕಾಂಪ್ಲೆಕ್ಸ್ ಜಿಂಕು ತಗೊಳ್ಳಬೇಕು ತೊಗೊಂಡ್ರೆ ಮಾತ್ರ ಯೂರಿಯಾ ಕೊಡುವುದು ಎಂದು ದೌರ್ಜನ್ಯ ಮಾಡುತ್ತಿದ್ದಾರೆ ಗೊಬ್ಬರ ಅಂಗಡಿ ಮಾಲೀಕರು, ರೈತ ದೇಶದ ಬೆನ್ನೆಲುಬು ಅಂತಾರೆ ಆದರೆ ಗಂಗಾವತಿ ಗೊಬ್ಬರದ ಅಂಗಡಿ ಮಾಲೀಕರು ರೈತರ ರಕ್ತವನ್ನು ಹೇರುತ್ತಿದ್ದಾರೆ, ರೈತರಿಗೆ ಮೋಸ ಮಾಡುತ್ತಿದ್ದಾರೆ ಅಧಿಕಾರಿಗಳಂತೂ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸ, ಗಂಗಾವತಿ ಅಧಿಕಾರಿಗಳು ಗೊಬ್ಬರದ ಅಂಗಡಿ ಮಾಲಿಕರಿಗೆ ಪುಲ್ ಸಪೋರ್ಟ್ ಕೊಡ್ತಾಯಿದ್ದಾರೆ, ಅಧಿಕಾರಿಗಳ ಕುಮ್ಮಕ್ಕಿನಿಂದ ಗೊಬ್ಬರ ಅಂಗಡಿ ಮಾಲೀಕರು ಮನಬಂದಂತೆ ದರ ನಿಗದಿ ಮಾಡಿರುವುದು ಕೃಷಿ ಇಲಾಖೆ ಅಧಿಕಾರಿಗಳ ಶಾಮಿಲ್ ಇಲ್ಲದೆ ನಡೆಯೋದಿಲ್ಲ, ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳನ್ನ ಈ ಕೂಡಲೇ ಅಮಾನತ್ತು ಮಾಡಬೇಕು,
ಬೇಕಿದೆ ಖಡಕ್ ಅಧಿಕಾರಿ..!
ಜಿಲ್ಲಾಡಳಿತ ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳು ಕೃಷಿ ಮಾರುಕಟ್ಟೆಗಳನ್ನು ಪರಿಶೀಲನೆ ಮಾಡಿ ಹೆಚ್ಚಿನ ಮೊತ್ತ ಪಡೆಯುವವರಿಗೆ ಕಡಿವಾಣ ಹಾಕಬೇಕು, ಗಂಗಾವತಿ ತಾಲ್ಲೂಕಿನಲ್ಲಿ ಒಂದೆ ಅಲ್ಲ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿದೆ ಇದೊಂದು ದೊಡ್ಡ ಗ್ಯಾಂಗ್ ಇದೆ ಇದನ್ನು ಬೇಧಸಲು ಬೇಕಿದೆ ಖಡಕ್ ಅಧಿಕಾರಿಗಳು, ಇದೆ ತರ ಮಾಡುತ್ತಿದ್ದರೆ ರೈತರು ರೊಚ್ಚಿಗೆಳುವ ಮುಂಚೆ ಎಚ್ಚತ್ತುಕೊಳ್ಳಿ ಈ ಕೂಡಲೇ ಕ್ರಮಜರುಗಿಸಿ
ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಗಂಗಾವತಿ ತಾಲೂಕಿನ ಸಮಸ್ತ ರೈತರು ಸೇರಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ  ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಂಬರೀಶ್ ಗೋನಾಳ್ ರುದ್ರೇಶ್ ಡ್ಯಾಗಿ ಹಾಗೂ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ.

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ. ತುಂಗಾವಾಣಿ ಗಂಗಾವತಿ ನ-18 ಗಂಗಾವತಿ ನಗರದ ಜನನಿಬಿಡ ವೃತ್ತವಾದ ಸಿಬಿಎಸ್ …