Breaking News

ಗಂಗಾವತಿ ನಗರದ ಲಾಡ್ಜ್ ಒಂದರಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆ..!

ಗಂಗಾವತಿ ನಗರದ ಲಾಡ್ಜ್ ಒಂದರಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆ..!

ತುಂಗಾವಾಣಿ.
ಗಂಗಾವತಿ: ಜು31, ನಗರದ ಬಂಡಾರಿಕರ ಲಾಡ್ಜ್ ನಲ್ಲಿ ಕಳೆದ ಜು28 ರಂದು ಲಾಡ್ಜ್ ರೂಂ ಬಾಡಿಗೆ ಪಡೆದ ಹೊಸಪೇಟೆ ಮೂಲದ ಶ್ರೀನಿವಾಸ (53) ವರ್ಷ ಎಂಬ ವ್ಯಕ್ತಿ ವಯಕ್ತಿಕ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ, ಮೃತ ವ್ಯಕ್ತಿ ಹೊಸಪೇಟೆ KSRTC ಡಿಪೋ ಕಂಡಕ್ಟರ್ ಎಂದು ಗುರುತಿಸಲಾಗಿದೆ, ಜು29 ರಂದು ಲಾಡ್ಜ್ ಮಾಲೀಕರಿಗೆ ಬಾಡಿಗೆ ಕೊಟ್ಟಿರುತ್ತಾನೆ, ಎರಡು ದಿನಗಳಾದರು ರೂಂ ಬಾಗಿಲು ತಗೆದಿರುವುದಿಲ್ಲ ಅನುಮಾನ ಗೊಂಡ ಲಾಡ್ಜ್ ಸಿಬ್ಬಂದಿ ಬಾಗಿಲು ತಗೆದು ನೋಡಿದರೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುತ್ತದೆ,
ಡೆತ್‌ ನೋಟ್..!
ವ್ಯಕ್ತಿ ಆತ್ಮಹತ್ಯೆಗೂ ಮುಂಚೆ ಡೆತ್ ನೋಟ್ ಬರೆದಿರುತ್ತಾನೆ, ಅದರಲ್ಲಿ ನಾನು ಕೆಲ ದಿನಗಳ ಹಿಂದೆ ನನ್ನ ಕೆಲಸದ ಬಗ್ಗೆ ಅಮಾನತ್ತು ಮಾಡಲಾಗಿದೆ ಎನ್ನುವ ಶಂಕೆ ಇದೆ ಎನ್ನಲಾಗುತ್ತಿದೆ..!?
ಆದರೆ ಎಲ್ಲಾ ಮೇಲಾಧಿಕಾರಿಗಳು ಎಲ್ಲರೂ ಒಳ್ಳೆಯವರೆ ಅವರು ನೂರಾರು ವರ್ಷಗಳ ಕಾಲ ದೇವರು ಚನ್ನಾಗಿಟ್ಟಿರಲಿ, ನನ್ನ ಕುಟುಂಬದವರು ಒಳ್ಳೆಯವರೆ, ಹಾಗು ನನ್ನ ವಯಕ್ತಿಕ ಸಾಲ ಇಂತಿಷ್ಟು ಇದೆ ನನಗೆ ಬರುವ ಹಣದಲ್ಲಿ ಆ ಸಾಲವನ್ನು ಮುಟ್ಟಿಸಿ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎನ್ನಲಾಗುತ್ತಿದೆ..!?
ಮೃತಪಟ್ಟ ಕುಟುಂಬದವರು ಆಗಮಿಸಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ,
ಸ್ಥಳಕ್ಕೆ ನಗರ ಠಾಣೆಯ ಪಿಐ ವೆಂಕಟಸ್ವಾಮಿ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ..!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ತುಂಗಾವಾಣಿ ಇನ್ಫ್ಯಾಕ್ಟ್..! ಅಕ್ರಮವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ಮೂರು ಲಾರಿಗಳು ವಶಕ್ಕೆ. ತುಂಗಾವಾಣಿ. ಗಂಗಾವತಿ: ಸೆ-18 ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಮಿಂಚಿನ …