Breaking News

ಆಸ್ಪತ್ರೆಯ ಮುಂದೆ ಶವವಿಟ್ಟ ಪ್ರತಿಭಟನೆ, ವೈದ್ಯೆ ನಿರ್ಲಕ್ಷ್ಯಕ್ಕೆ ಜೀವ ತೆತ್ತ ದಲಿತ ಮಹಿಳೆ..!

ಆಸ್ಪತ್ರೆಯ ಮುಂದೆ ಶವವಿಟ್ಟ ಪ್ರತಿಭಟನೆ,
ವೈದ್ಯೆ ನಿರ್ಲಕ್ಷ್ಯಕ್ಕೆ ಜೀವ ತೆತ್ತ ದಲಿತ ಮಹಿಳೆ..!


ತುಂಗಾವಾಣಿ.
ಕೊಪ್ಪಳ:ಸೆ-22 ಜಿಲ್ಲೆಯ ಕಾರಟಗಿ ಪಟ್ಟಣದ ಇಂದಿರಾ ನಗರದ ನಿವಾಸಿ ನಾಗಮ್ಮ(24) ಎನ್ನುವವರು ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸರ್ಕಾರಿ ಆಸ್ಪತ್ರೆ)ಗೆ ಹೊಟ್ಟೆ ನೋವು ಎಂದು ತೆರಳಿದಾಗ, ಆಡಳಿತ ವೈದ್ಯಧಿಕಾರಿ ಡಾಕ್ಟರ್ ಶಕುಂತಲಾ ರವರು ಬೇಜವಾಬ್ದಾರಿ ಯಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ಮುಂದೆ ಶವ ವಿಟ್ಟು ಪ್ರತಿಭಟನೆ ನಡೆದ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ,

ಕಳೆದ ಹದಿಮೂರು ತಿಂಗಳ ಹಿಂದೆ ನಾಗಮ್ಮ ಎನ್ನುವ ಮಹೆಳೆ ಹೆರಿಗೆ ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಗ ಗರ್ಭ ಕೋಶದಲ್ಲಿ ಕಾಪರ್ ಟಿ ಹಾಕಲಾಗಿತ್ತು, ಹಾಕಿದ ಸ್ವಲ್ಪ ದಿನಗಳ ನಂತರ ತೆಗೆದರೆ ಮತ್ತೆ ಮಕ್ಕಳು ಬೇಕೆಂದರೆ ಅದನ್ನು ತೆಗೆಯಬಹುದು, ಆದರೆ ಆಡಳಿತ ವೈದ್ಯೆ ಶಕುಂತಲಾ ಗರ್ಭಕೋಶದಲ್ಲಿ ಕಾಪರ್ ಟಿ ಸರಿಯಾಗಿ ಹಾಕಲಾರದೆ ಬೇರೆಡೆ ಹಾಕಿದ್ದಾರೆ ಅದು ಆ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ,
ನಂತರ ಆಸ್ಪತ್ರೆಗೆ ಬಂದ ಮಹಿಳೆಗೆ ಚಿಕಿತ್ಸೆ ಕೊಡುತ್ತವೆ ಎಂದು ಸುಮಾರು ಗಂಟೆಗಳ ನಂತರ ಚಿಕಿತ್ಸೆ ಅರ್ಧಕ್ಕೆ ಮೊಟುಕು ಗೊಳಿಸಿ ಗಂಗಾವತಿಯಲ್ಲಿ ತ್ರಿಡಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ಸಲಹೆ ನೀಡಿರುತ್ತಾರೆ, ಅದೆ ರೀತಿಯಲ್ಲಿ ಮಹಿಳೆಯ ಕುಟುಂಬಸ್ಥರು ಗಂಗಾವತಿಗೆ ತ್ರಿಡಿ ಸ್ಕ್ಯಾನ್ ಮಾಡಿಸಿಲು ಬಂದಾಗ ಸ್ಕ್ಯಾನ್ ಮಾಡಿದ ವೈದ್ಯರು ನೇರವಾಗಿ ಕಾರಟಗಿ ವೈದ್ಯೆ ಶಕುಂತಲಾ ರಿಗೆ ಮಾತನಾಡಿ ಈ ವಿಷಯದ ಬಗ್ಗೆ ತಿಳಿಸಿದಾಗ ಆಸ್ಪತ್ರೆಯ ಆಡಳಿತ ಮಂಡಳಿ ಅಂಬುಲೇನ್ಸ ತಾವೆ ರಡಿ ಮಾಡಿ ಬಳ್ಳಾರಿಗೆ ಹೋಗಲು ವ್ಯವಸ್ಥೆ ಮಾಡುತ್ತಾರೆ, ನಂತರ ಆಡಳಿತ ವೈದ್ಯೆ ಶಕುಂತಲಾ ರನ್ನು ಸಂಪರ್ಕಿಸಿದಾಗ ನಾನು ಬೇರೆಡೆ ಇರುವೆ, ತಮಗೆ ಬಳ್ಳಾರಿಗೆ ಹೋಗಲು ವಾಹನದ ವ್ಯವಸ್ಥೆ ಮಾಡಲಾಗಿದೆ, ತಾವುಗಳು ಬಳ್ಳಾರಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿ ನುಳಿಚಿಕೊಂಡಿದ್ದಾರೆ,

ಜಾಹೀರಾತು
ಅಸಾಯಹಕ ಕುಟುಂಬ ಬಳ್ಳಾರಿಗೆ ಹೋರಟರು, ಇನ್ನೇನು ಬಳ್ಳಾರಿ ಸಮೀಪ ಇರುವಾಗಲೆ ಮಹಿಳೆ ಜೀವ ಹೋಯಿತು ಎಂದು ಕುಟುಂಬಸ್ಥರ ಹೇಳಿಕೆ,
ಬಳ್ಳಾರಿ ವೈದ್ಯರನ್ನು ಸಂಪರ್ಕಿಸಿದ ಕುಟುಂಬ, ಬಳ್ಳಾರಿ ವೈದ್ಯರ ಹೇಳಿಕೆ ಪ್ರಕಾರ ಈ ಮಹಿಳೆಗೆ ಸರಿಯಾದ ಗರ್ಭಕೋಶದಲ್ಲಿ ಕಾಪರ್ ಟಿ ಸರಿಯಾಗಿ ಹಾಕಿಲ್ಲ ಹಾಗಾಗಿ ಇ ಮಹಿಳೆ ಜೀವ ಬಿಟ್ಟಿದ್ದಾಳೆ ಎಂದು ಹೇಳಿಕೆ ಕೊಟ್ಟಿದ್ದಾರೆ,
ಪೊಸ್ಟ್ ಮಾಟಮ್ ಮಾಡಿದ ನಂತರ ಸತ್ಯ ಹೊರ ಬರಲಿದೆ ಎಂದು ಕಾದು ಕುಳಿತ ಕುಟುಂಬಸ್ಥರು, ಆದರೆ ವೈದ್ಯರು ಅದನ್ನು ತಿರಿಚುವ ಕೆಲಸ ಸಹ ಆಗಲಿದೆ ನಮಗೆ ನ್ಯಾಯ ದೊರೆಯುವುದು ಅನುಮಾನ ಎನ್ನುವುದು ಕುಟುಂಬಸ್ಥರ ಹೇಳಿಕೆ,
ಅದರಿಂದ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದೆವೆ, ದಲಿತ ಮಹಿಳೆಗೆ ನ್ಯಾಯ ಬೇಕು ಎಂದು ದಲಿತ ಮುಖಂಡ ಹನುಮೇಶ ತುಂಗಾವಾಣಿಗೆ ತಿಳಿಸಿದ್ದಾರೆ,

ಸ್ಥಳಕ್ಕೆ ಶಾಸಕ ದಡೆಸೂಗುರು & DYSP ಉಜ್ಜಿನಕೊಪ್ಪ ಭೇಟಿ.
ಘಟನೆ ಗಂಭಿರಕೊಳ್ಳುತ್ತಿದ್ದಂತೆ ತಡರಾತ್ರಿ ಸ್ಥಳಕ್ಕೆ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿ ಸರ್ಕಾರದಿಂದ ಪರಿಹಾರದ ಬರವಸೆ ನೀಡಿ ಹಾಗೆಯೇ ತಮ್ಮ ಕೈಲಾದ ಸಹಾಯ ಮಾಡತ್ತೆನೆ ಎಂದು ಬರವಸೆ ಕೊಟ್ಟು ತೆರಳಿದರು.
ಗಂಗಾವತಿ DYSP ಉಜ್ಜಿನಕೊಪ್ಪ ಭೇಟಿನೀಡಿ ಆಸ್ಪತ್ರೆಯ ವಿರುದ್ಧ ಬಹಳಷ್ಟು ಆರೋಪಗಳು ಕೇಳಿ ಬರುತ್ತಿವೆ ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುವೆ, ನಂತರ ಮರಣೋತ್ತರ ಪರೀಕ್ಷೆ ಬಂದ ನಂತರ ಅವರು ಯಾರೆ ಇರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೆವೆ, ದಯವಿಟ್ಟು ಶವ ಸಂಸ್ಕಾರ ಮಾಡಿ ಎಂದು ಹೇಳಿದಾಗ ಕುಟುಂಬಸ್ಥರು ಶವವನ್ನು ತೆಗೆದುಕೊಂಡು ಹೋಗಿ ಅಂತಿಮ ವಿಧಿ ವಿಧಾನಗಳನ್ನು ನೇರವೆರಿಸಿದರು,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಕೊಪ್ಪಳ: ಕರ್ನಾಟಕ ಬ್ಯಾಂಕ್‌ನಲ್ಲಿ ದರೋಡೆ, ಕೋಟ್ಯಾಂತರ ರೂ. ಮೌಲ್ಯದ ಆಭರಣ, ನಗದು ಕನ್ನ

ಕೊಪ್ಪಳ: ಕರ್ನಾಟಕ ಬ್ಯಾಂಕ್‌ನಲ್ಲಿ ದರೋಡೆ, ಕೋಟ್ಯಾಂತರ ರೂ. ಮೌಲ್ಯದ ಆಭರಣ, ನಗದು ಕನ್ನ ತುಂಗಾವಾಣಿ. ಕೊಪ್ಪಳ:ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕರ್ನಾಟಕ …