ಪಾಪಯ್ಯ ಟೆನಾಲ್ ಸುರಂಗಕ್ಕೆ ಭದ್ರತೆ ಇಲ್ಲ.!
ಇನ್ನೂ ನಿಲ್ಲುತ್ತಿಲ್ಲ ಅಕ್ರಮ ಕಲ್ಲು ಗಣಿಗಾರಿಕೆ.
ತುಂಗಾವಾಣಿ.
ಗಂಗಾವತಿ: ತಾಲ್ಲೂಕಿನ ರಾಂಪುರ ಮತ್ತು ಮಲ್ಲಾಪುರ ಗ್ರಾಮದಲ್ಲಿ ಹತ್ತಿರ ಬರುವ ತುಂಗಭದ್ರಾ ಎಡದಂಡೆಯ ಕಾಲುವೆಯ ಪಾಪಯ್ಯ ಟೆನಾಲ್ ಸುರಂಗ ಮಾರ್ಗದ ಬಳಿ ಇನ್ನೂ ನಿಲ್ಲುತ್ತಿಲ್ಲ ಅಕ್ರಮ ಕಲ್ಲು ಗಣಿಗಾರಿಕೆ,
ಕೆಲ ದಿನಗಳ ಹಿಂದೆ ತುಂಗಾವಾಣಿ “ಎಡದಂಡೆಗೆ ಕಾದಿದೆ ದುರಂತ ” ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು, ಸಂಬಂಧಿಸಿದ ಅಧಿಕಾರಿಗಳ ತಂಡ ಭೇಟಿ ನೀಡಿ ಮೂರು ಲಾರಿಗಳನ್ನು ವಶಕ್ಕೆ ಪಡೆದು ಕೇಸ್ ಸಹ ದಾಖಲಿಸಿದ್ರು,
ಇನ್ನೂ ನಿಲ್ಲುತ್ತಿಲ್ಲ ದಂಧೆ..!
ಹೌದು ನಮ್ಮ ಟಾಸ್ಕ್ ಫೋರ್ಸ್ ಅಧಿಕಾರಿಗಳೇನು ಬಂದ್ರು ಮೂರು ಲಾರಿ ಹಿಡಿದ್ರು ಕೇಸ್ ಹಾಕಿ ಸರ್ಕಾರದ ಕೆಲಸ ದೇವರ ಕೆಲಸ ಮಾಡಿ ಹೋದ್ರು, ಆದರೆ ಮಲ್ಲಾಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಅಕ್ರಮ ಕಲ್ಲು ಬಂಡೆಗಳನ್ನು ಸ್ಪೋಟಿಸಿವ ದಂಧೆ ಇನ್ನೂ ಚಾಲ್ತಿಯಲ್ಲೆ ಇದೆ, ಕೆಲ ದಂಧೆಕೋರರಿಂದ ರಾಜಾರೋಷವಾಗಿ ಈಗಲೂ ನಡೆಯುತ್ತಿದೆ ಕಲ್ಲು ಗಣಿಗಾರಿಕೆ, ಅವರು ಸ್ಪೋಟಕ ವಸ್ತುಗಳನ್ನು ಬಳಸಿ ಸ್ಪೋಟಿಸುತ್ತಿರುವುದರಿಂದ ನಮ್ಮ ಎಡದಂಡೆಯ ಪಾಪಯ್ಯ ಟೆನಾಲ್ ಸುರಂಗ ಮಾರ್ಗಕ್ಕೆ ದಕ್ಕೆ ಯಾಗುತ್ತಿದೆ, ಎಂದು ಮೊನ್ನೆ ತಾನೆ ಅಗಳಕೇರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದೂರು ಸಹ ಸಲ್ಲಿಸಿದ್ದರು, ಹಾಗೇಯೆ ಈ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಕರಡಿ ಚಿರತೆ ಮೊಲ ನವಿಲು ಕೋತಿಗಳು ಹೀಗೆ ಅನೇಕ ಜೀವ ಸಂಕುಲವನ್ನು ಹೊಂದಿರುವ ನಮ್ಮ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಜೀವಿಸುತ್ತವೆ ಅವುಗಳಿಗೆ ಗಂಡಾಂತ ಇರುವುದಂತು ಸತ್ಯ, ಈಗಲಾದರು ದಂಧೆಕೂರರ ಸಹಾಯಕ್ಕೆ ಅಧಿಕಾರಿಗಳು ನಿಲ್ಲದೆ ಅಕ್ರಮಕ್ಕೆ ಕಡಿವಾಣ ಹಾಕಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ..!
ಇದರ ಹಿಂದೆ ಯಾರಿದ್ದಾರೆ,
ಇದರ ವಿಸ್ತೃತ ವರದಿ ಮುಂದಿನ ಸಂಚಿಕೆಯಲ್ಲಿ ಬರಲಿದೆ ಕಾದು ನೋಡಿ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
ವಿಶೇಷ ಸೂಚನೆ:
ತುಂಗಾವಾಣಿ ನ್ಯೂಸ್ ನಲ್ಲಿ ಯಾವುದೆ ಸಿಬ್ಬಂದಿ/ಏಜೆಂಟ್ ರನ್ನು ನೇಮಿಸಿಕೊಂಡಿರುವುದಿಲ್ಲ ಯಾರಾದರೂ ತುಂಗಾವಾಣಿ ಪತ್ರಿಕೆ/ನ್ಯೂಸ್ ನವರು ಎಂದು ಹೇಳಿಕೊಂಡು ಬಂದರೆ ಕೂಡಲೇ ಈ ನಂಬರ್ ಗೆ ಮಾಹಿತಿ ಕೊಡಿ.
9164449191
ಧನ್ಯವಾದಗಳು.