Breaking News

ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ನೀತಿಗಳನ್ನು ವಿರೋಧಿಸಿ. SFI ವತಿಯಿಂದ ಪ್ರತಿಭಟನಾ ಮನವಿ.

ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ನೀತಿಗಳನ್ನು ವಿರೋಧಿಸಿ.
SFI ವತಿಯಿಂದ ಪ್ರತಿಭಟನಾ ಮನವಿ.

ತುಂಗಾವಾಣಿ
ಗಂಗಾವತಿ ಜುಲೈ 08 ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಗಂಗಾವತಿ ತಾಲೂಕ ಸಮಿತಿಯ ಸದಸ್ಯರು ಇಂದು ಗಂಗಾವತಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ SFI ತಾಲೂಕಾ ಅಧ್ಯಕ್ಷ ಗ್ಯಾನೇಶ್ ಕಡಗದ ಕೊರೋನಾ ವೈರಸ್ ನ ಅತಿಯಾದ ಹರಡುವಿಕೆ ಮತ್ತು ಲಾಕ್ ಡಾನ್ ನಿಂದಾಗಿ ನಮ್ಮ ವಿಶ್ವ, ನಮ್ಮ ದೇಶ ಸೇರಿ ಕರ್ನಾಟಕ ರಾಜ್ಯವು ಸಂಕಷ್ಟಕ್ಕೆ ಸಿಲುಕಿದೆ ರಾಜ್ಯದ ಜನತೆ ಹೊಟ್ಟೆ, ಬಟ್ಟೆ, ಆಶ್ರಯ ಮತ್ತು ಉದ್ಯೋಗ ಕ್ಕಾಗಿ ಪರದಾಡುತ್ತಾ ಆದಾಯ ಇಲ್ಲದೆ ಅತಿಯಾದ ಸಂಕಷ್ಟಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಇದ್ದಾರೆ. ರಾಜ್ಯದ ವಿದ್ಯಾರ್ಥಿ ಸಮುದಾಯವು ಇದಕ್ಕೆ ಹೊರತಾಗಿಲ್ಲ ಆದರೆ ಆಳುವ ಸರ್ಕಾರ ಮಾತ್ರ ವಿದ್ಯಾರ್ಥಿ ಸಮಸ್ಯೆಗಳು ಸೇರಿ ಅವರ ಭವಿಷ್ಯದ ಶೈಕ್ಷಣಿಕ ಬದುಕಿನ ಬಗ್ಗೆ ಗಮನ ಹರಿಸುತ್ತಿಲ್ಲ ಹಾಗಾಗಿ ಕೂಡಲೇ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈ ಬಿಟ್ಟು ಈ ಕೆಳಗಿನ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿದರು

SFI ಗಂಗಾವತಿ ತಾಲೂಕ ಸಮಿತಿಯ ಸದಸ್ಯರು ಗಂಗಾವತಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಲವು ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು
ಸರ್ಕಾರ ಆರು ತಿಂಗಳ ಎಲ್ಲಾ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು.
ಪರೀಕ್ಷೆಗಳನ್ನು ರದ್ದುಪಡಿಸಲು SFI ಸಂಘಟನೆ ಆಗ್ರಹ.
ಲಾಕ್ ಡೌನ್ ಸಮಯದಲ್ಲಿ 6 ತಿಂಗಳ ಕಾಲ ಪ್ರತಿ ತಿಂಗಳು ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರ ರೂ .7500 / – ನೀಡಬೇಕು.
ದೇಶಾದ್ಯಂತ ಯುವತಿಯರು ಮೇಲಿನ ಅತ್ಯಾಚಾರ ಮತ್ತು ಕೊಲೆಗಳ ಏರಿಕೆ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು.
ಹೊಸ ಶಿಕ್ಷಣ ನೀತಿ-2019 ಜಾರಿಯಿಂದಾಗುವ ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ನೀತಿಗಳನ್ನು ವಿರೋಧಿಸಿ.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಗಂಭಿರವಾಗಿ ಪರಿಗಣಿಸಿ ಈಡೇರಿಕೆಗೆ ಮುಂದಾಗ ಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ SFI ತಾಲೂಕ ಅಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ, ನಾಗರಾಜ, ಸೋಮು, ಉಮೇಶ, ನಾಗರಾಜ, ಯು.ಬಾಳಪ್ಪ , ದೇವು, ಇತರರು ಇದ್ದರು.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.