Breaking News

ಸಂಪಾದಕರು

ಕ್ಷುಲ್ಲಕ ಕಾರಣ ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ: ಐವರು ಆರೋಪಿಗಳ ಬಂಧನ.

ಕ್ಷುಲ್ಲಕ ಕಾರಣ: ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ: ಐವರು ಆರೋಪಿಗಳ ಬಂಧನ. ತುಂಗಾವಾಣಿ. ಗಂಗಾವತಿ: ಮೇ-23 ನಗರದ ಜುಲೈ ನಗರ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಈರ್ವರಿಗೆ ಐವರರಿಂದ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಹಲ್ಲೇಗೊಳಗಾದವರು ಯಂಕೋಬ (50) ರಾಘು (28) ಎಂದು ಹೇಳಲಾಗುತ್ತಿದೆ ಸಧ್ಯಕ್ಕೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ಮಾಡಿದ ಕುಮಾರ್ ತಂದೆ …

Read More »

ರೈಲು ಗಾಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.

ಸಾಂದರ್ಭಿಕ ಚಿತ್ರ

ರೈಲು ಗಾಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ. ತುಂಗಾವಾಣಿ ಗಂಗಾವತಿ ಮೇ 16 ರೈಲು ಹಳಿಗಳ ಮೇಲೆ ಹೋಗುತ್ತಿರುವಾಗ ರೈಲು ಗಾಲಿಗೆ ಸಿಲುಕಿ ಬಲಗಾಲು ತುಂಡಾಗಿ ಬಲಗೈ ಮುರಿದು ಅಪಘಾತವಾದ ಘಟನೆ ಇಂದು ಸಂಜೆ 6-30 ರ ಸುಮಾರಿಗೆ ಜರುಗಿದೆ. ಗಂಗಾವತಿಯ ಮೆಹೆಬೂಬುನಗರದ ನಿವಾಸಿ ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ ಮಾಡುತ್ತಿದ್ದ ಮರ್ದಾನಸಾಬ ಅಲಿಯಾಸ್ ಟಾಗೋರ್ (37) ವ್ಯಕ್ತಿಯು ಸಂಜೆ ವೇಳೆ ರೈಲು ಹಳಿಗಳ ದಿಬ್ಬವೇರಿ ಹೋಗುತ್ತಿರುವಾಗ ಕಾರಟಗಿ ಯಶವಂತಪುರ ರೈಲು …

Read More »

ಲಂಚಕ್ಕೆ ಕೈವಡ್ಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಉಪ ಆಯುಕ್ತೆ.!

ಲಂಚಕ್ಕೆ ಕೈವಡ್ಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಉಪ ಆಯುಕ್ತೆ.! ತುಂಗಾವಾಣಿ ಕೊಪ್ಪಳ ಮೇ 14 ಲಂಚ ಪಡೆಯುತ್ತಿದ್ದ ವೇಳೆ ಅಬಕಾರಿ ಡಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕುಷ್ಟಗಿಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸಿ ಸೆಲಿನಾ ಕುಷ್ಟಗಿ ಪಟ್ಟಣದಲ್ಲಿ ಇಂದು ಲಕ್ಷ ರೂ ಗಳ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಡಿಎಸ್‌ಪಿ ಶಿವಕುಮಾರ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ. ಕುಷ್ಟಗಿ ಪಟ್ಟಣದ ಬಾರ್ …

Read More »

ನಗರಸಭೆ ಉಪಾಧ್ಯಕ್ಷೆ ಬಿಜೆಪಿಯ ಸುಧಾ ಸೋಮನಾಥ ಸದಸ್ಯತ್ವ ರದ್ದು.!

ನಗರಸಭೆ ಉಪಾಧ್ಯಕ್ಷೆ ಬಿಜೆಪಿಯ ಸುಧಾ ಸೋಮನಾಥ ಸದಸ್ಯತ್ವ ರದ್ದು.! ತುಂಗಾವಾಣಿ ಕೊಪ್ಪಳ ಮೇ 11 ಪಕ್ಷಾಂತರ ನಿಷೇಧ ಕಾಯ್ದೆಯಡಿ ನಗರಸಭೆ ಉಪಾಧ್ಯಕ್ಷೆಯ ಸದಸ್ಯತ್ವ ಸ್ಥಾನ ರದ್ದು ಪಡಿಸಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶಿಸಿದ್ದಾರೆ. ಗಂಗಾವತಿ ನಗರಸಭೆಯ ವಾರ್ಡ್ ಸಂಖ್ಯೆ 26 ರಲ್ಲಿ ಬಿಜೆಪಿಯ ಚಿನ್ಹೆಯಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀಮತಿ ಸುಧಾ ಸೋಮನಾಥ ಅವರು ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವೇಳೆ ತಮ್ಮ ಮತವನ್ನು ಅಧ್ಯಕ್ಷ ಸ್ಥಾನಕ್ಕೆ …

Read More »

ಅಬಕಾರಿ ಡಿಸಿಗೆ ಘೇರಾವ್.!? ಸರ್ಕಾರಿ ಕೆಲಸಕ್ಕೆ ಅಡ್ಡಿ 80 ಜನರ ಮೇಲೆ ಕೇಸು ದಾಖಲು.!

ಅಬಕಾರಿ ಡಿಸಿಗೆ ಘೇರಾವ್.!? ಸರ್ಕಾರಿ ಕೆಲಸಕ್ಕೆ ಅಡ್ಡಿ 80 ಜನರ ಮೇಲೆ ಕೇಸು ದಾಖಲು.! ತುಂಗಾವಾಣಿ ಕೊಪ್ಪಳ ಮೇ 11 ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮಧ್ಯ ಮಾರಾಟ ತಡೆಯಲು ಹೋಗಿದ್ದ ಅಬಕಾರಿ ಉಪ ಆಯುಕ್ತರನ್ನೇ ಘೇರಾವು ಹಾಕಿ ಅಕ್ರಮ ಮಧ್ಯದ ಅಂಗಡಿಯನ್ನು ಪರೀಶಿಲಿಸಲು ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಬಂದ …

Read More »

ವರ್ಗಾವಣೆ ಹಿಂದೆ ಲಂಚದ ವಾಸನೆ ಹರಡಿತ್ತಾ ತಹಶಿಲ್ದಾರ್ ಕುರ್ಚಿಯ ಮೇಲೆ.!?

ವರ್ಗಾವಣೆ ಹಿಂದೆ ಲಂಚದ ವಾಸನೆ ಹರಡಿತ್ತಾ ತಹಶಿಲ್ದಾರ್ ಕುರ್ಚಿಯ ಮೇಲೆ.!? ತುಂಗಾವಾಣಿ. ಕೊಪ್ಪಳ: ಮೇ-8 ಜಿಲ್ಲೆಯ ಗಂಗಾವತಿ ತಹಶಿಲ್ದಾರರ ಕಚೇರಿ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದೆ ಇರುತ್ತೆ. ಈ ಹಿಂದೆ ಗಂಗಾವತಿ ತಹಶಿಲ್ದಾರಾಗಿದ್ದ ಎಲ್.ಡಿ ಚಂದ್ರಕಾಂತ ರವರನ್ನು ACB ಬಲೆಗೆ ಬಿದ್ದಿದ್ದರು. ನಂತರ ಬಂದ ತಹಶಿಲ್ದಾರ ರೇಣುಕಮ್ಮರವರು ತುಂಗಾವಾಣಿ ಸ್ಟಿಂಗ್ (ಕುಟುಕು ಕಾರ್ಯಾಚರಣೆಯಲ್ಲಿ) ಲಂಚದ ಬಗ್ಗೆ ವರದಿ ಬೆನ್ನಲ್ಲೇ ಅಮಾನತ್ತು ಆಗಿದ್ದರು. ನಂತರ ಬಂದ ಕೆ.ಎ.ಎಸ್. ಪರಿಣಿತ ಯು.ನಾಗರಾಜರವರು ತಮ್ಮ …

Read More »

ವಿದ್ಯುತ್ ಅವಘಡ, ತಾಯಿ ಇಬ್ಬರು ಮಕ್ಕಳ ಧಾರುಣ ಸಾವು.

ವಿದ್ಯುತ್ ಅವಘಡ, ತಾಯಿ ಹಾಗು ಇಬ್ಬರು ಮಕ್ಕಳ ಧಾರುಣ ಸಾವು. ತುಂಗಾವಾಣಿ ಕೊಪ್ಪಳ ಮೇ 06 ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನಪ್ಪಿದ ಘಟನೆ ನಡೆದಿದೆ. ತೊಳೆದ ಹಸಿ ಬಟ್ಟೆಗಳನ್ನು ಒಣಗಲು ಹಾಕುವ ವೇಳೆ ಅರ್ಥಿಂಗ್ ವಾಯರ್‌ನಿಂದ ವಿದ್ಯುತ್ ಪ್ರವಹಿಸಿದೆ, ಆಟ ವಾಡುತ್ತಿದ್ದ ಮಕ್ಕಳಿಗೆ ಮತ್ತು ತಾಯಿಗೆ ಮಾರಕ ವಿದ್ಯುತ್ ಶಾಕ್‌ ತಗುಲಿ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ, …

Read More »

ಸ್ವಪಕ್ಷದ ಬಂಡಾಯಗಾರರಿಗೆ ಬಿಸಿ ಮುಟ್ಟಿಸಲಿರುವ ಅನ್ಸಾರಿ…! ಗದ್ದುಗೆ ಆಸೆಗೆ ಬಿದ್ದವರಿಗೆ ಭಾರೀ ಗುದ್ದು ನೀಡಲಿದ್ದಾರೆಯೇ ಮಾಜಿ ಸಚಿವ..!?

ಸ್ವಪಕ್ಷದ ಬಂಡಾಯಗಾರರಿಗೆ ಬಿಸಿ ಮುಟ್ಟಿಸಲಿರುವ ಅನ್ಸಾರಿ…! ಗದ್ದುಗೆ ಆಸೆಗೆ ಬಿದ್ದವರಿಗೆ ಭಾರೀ ಗುದ್ದು ನೀಡಲಿದ್ದಾರೆಯೇ ಮಾಜಿ ಸಚಿವ..!? ತುಂಗಾವಾಣಿ. ಗಂಗಾವತಿ, ಮೇ.03 : ಸಮೀಪದ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದ್ದು, ಅಭಿವೃದ್ಧಿ ಅಧಿಕಾರಿಯ ಭ್ರಷ್ಟಚಾರ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದ ಕಿತ್ತಾಟದಿಂದಾಗಿ ಗ್ರಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಳೆದ ಒಂದು ವರ್ಷದಿಂದ ಅಧಿಕಾರದ ಗದ್ದುಗೆ ಹಿಡಿದಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದ ಕಾಂಗ್ರೆಸ್ …

Read More »

ರೈಲು ಡಿಕ್ಕಿ. ಕುರಿಗಾಹಿ ವ್ಯಕ್ತಿ ಮತ್ತು ಹತ್ತಾರು ಕುರಿಗಳ ಸಾವು.!

ರೈಲು ಡಿಕ್ಕಿ. ಕುರಿಗಾಹಿ ವ್ಯಕ್ತಿ ಮತ್ತು ಹತ್ತಾರು ಕುರಿಗಳ ಸಾವು.! ತುಂಗಾವಾಣಿ ಕೊಪ್ಪಳ ಮೇ 01 ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಕುರಿಗಾಹಿ ಮೌಲಾಸಾಬ (30) ರೈಲು ಹರಿದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ಗದ್ದೆಯಲ್ಲಿ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುವಾಗ ಕುರಿಗಳು ರೇಲ್ವೆ ಹಳಿಗಳನ್ನು ದಾಟುವ ವೇಳೆ ಕಾರಟಗಿ ಯಶವಂತಪುರ ರೈಲು ಸಂಜೆ ಆರರ ಸುಮಾರಿಗೆ ವೇಗವಾಗಿ ಬಂದು ಡಿಕ್ಕಿಯಾಗಿದ್ದು ಕುರಿಗಳನ್ನು ಉಳಿಸಲು …

Read More »

ಪಿ ಐ ಉದಯರವಿ ವರ್ಗಾವಣೆ.

ಪಿ ಐ ಉದಯರವಿ ವರ್ಗಾವಣೆ. ತುಂಗಾವಾಣಿ ಕೊಪ್ಪಳ ಎ 29 ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಆಗಿ ಕಾರ್ಯನಿರ್ವಹಿಸಿ ಸದ್ಯ ಗ್ರಾಮೀಣ ಠಾಣೆ ಪಿಐ ಆಗಿರುವ ಖಡಕ್ ಅಧಿಕಾರಿ ಉದಯರವಿ ವರ್ಗಾವಣೆ ಆಗಿದ್ದಾರೆ. ಡಿಜಿ ಮತ್ತು ಐಜಿಪಿ ಪರವಾಗಿ ಡಾ. ಎಂ ಎ ಸಲೀಮ ಐಪಿಎಸ್ ಅವರು ಆದೇಶ ಹೊರಡಿಸಿ ಉದಯವಿ ಪಿ ಐ ರವರು ಹಲವಾರು ಪ್ರಕರಣಗಳಲ್ಲಿ ತನಿಖಾ ಲೋಪವೆಸಗಿರುವುದು ಹಾಗೂ ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು …

Read More »
error: Content is protected !!