ವಿದ್ಯುತ್ ಅವಘಡ, ತಾಯಿ ಹಾಗು ಇಬ್ಬರು ಮಕ್ಕಳ ಧಾರುಣ ಸಾವು.
ತುಂಗಾವಾಣಿ
ಕೊಪ್ಪಳ ಮೇ 06 ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನಪ್ಪಿದ ಘಟನೆ ನಡೆದಿದೆ.
ತೊಳೆದ ಹಸಿ ಬಟ್ಟೆಗಳನ್ನು ಒಣಗಲು ಹಾಕುವ ವೇಳೆ ಅರ್ಥಿಂಗ್ ವಾಯರ್‌ನಿಂದ ವಿದ್ಯುತ್ ಪ್ರವಹಿಸಿದೆ, ಆಟ ವಾಡುತ್ತಿದ್ದ ಮಕ್ಕಳಿಗೆ ಮತ್ತು ತಾಯಿಗೆ ಮಾರಕ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ,
ತಾಯಿ ಶೈಲಮ್ಮ ಗಂಡ ಉಮೇಶ್ (28) ಮತ್ತು ಮಕ್ಕಳಾದ ಸಾನ್ವಿ (6) ಹಾಗು ಪವನ್ (4) ದುರ್ದೈವಿಗಳಾಗಿದ್ದಾರೆ.
ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ,
ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.