ರೈಲು ಗಾಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.
ತುಂಗಾವಾಣಿ
ಗಂಗಾವತಿ ಮೇ 16 ರೈಲು ಹಳಿಗಳ ಮೇಲೆ ಹೋಗುತ್ತಿರುವಾಗ ರೈಲು ಗಾಲಿಗೆ ಸಿಲುಕಿ ಬಲಗಾಲು ತುಂಡಾಗಿ ಬಲಗೈ ಮುರಿದು ಅಪಘಾತವಾದ ಘಟನೆ ಇಂದು ಸಂಜೆ 6-30 ರ ಸುಮಾರಿಗೆ ಜರುಗಿದೆ.
ಗಂಗಾವತಿಯ ಮೆಹೆಬೂಬುನಗರದ ನಿವಾಸಿ ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ ಮಾಡುತ್ತಿದ್ದ ಮರ್ದಾನಸಾಬ ಅಲಿಯಾಸ್ ಟಾಗೋರ್ (37) ವ್ಯಕ್ತಿಯು ಸಂಜೆ ವೇಳೆ ರೈಲು ಹಳಿಗಳ ದಿಬ್ಬವೇರಿ ಹೋಗುತ್ತಿರುವಾಗ ಕಾರಟಗಿ ಯಶವಂತಪುರ ರೈಲು ವೇಗವಾಗಿ ಬಂದಿದ್ದು ವ್ಯಕ್ತಿಗೆ ಡಿಕ್ಕಿ ಹೊಡೆದಿದೆ, ರೈಲಿನಿಂದ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿಯ ಕಾಲು ಹಳಿಗಳ ಮಧ್ಯೆ ಸಿಕ್ಕಿಹಾಕಿಕೊಡ್ಡಿದ್ದು ರೈಲು ಗಾಲಿಗಳು ಹರಿದು ಕಾಲು ಎರಡು ತುಂಡಾಗಿ ಬಿದ್ದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೋಯ್ದಿದ್ದಾರೆ.
ಸ್ಥಳಕ್ಕೆ ನಗರಠಾಣೆ ಪಿಐ ವೆಂಕಟಸ್ವಾಮಿ ಭೇಟಿ ನೀಡಿ ಪರೀಶಿಲನೆ ನಡೆಸಿ ರೇಲ್ವೆ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.