ನಗರಸಭೆ ಉಪಾಧ್ಯಕ್ಷೆ ಬಿಜೆಪಿಯ ಸುಧಾ ಸೋಮನಾಥ ಸದಸ್ಯತ್ವ ರದ್ದು.!
ತುಂಗಾವಾಣಿ
ಕೊಪ್ಪಳ ಮೇ 11 ಪಕ್ಷಾಂತರ ನಿಷೇಧ ಕಾಯ್ದೆಯಡಿ ನಗರಸಭೆ ಉಪಾಧ್ಯಕ್ಷೆಯ ಸದಸ್ಯತ್ವ ಸ್ಥಾನ ರದ್ದು ಪಡಿಸಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶಿಸಿದ್ದಾರೆ.
ಗಂಗಾವತಿ ನಗರಸಭೆಯ ವಾರ್ಡ್ ಸಂಖ್ಯೆ 26 ರಲ್ಲಿ ಬಿಜೆಪಿಯ ಚಿನ್ಹೆಯಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀಮತಿ ಸುಧಾ ಸೋಮನಾಥ ಅವರು ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವೇಳೆ ತಮ್ಮ ಮತವನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಹಾಕಿ ಮತ್ತು ಸ್ವತಃ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಸದಸ್ಯರ ಮತಗಳಿಂದ ಗೆಲುವು ಸಾದಿಸಿದ್ದರು.
ಈ ಸಂಬಂದವಾಗಿ ಬಿಜೇಪಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ದೂರು ಸಲ್ಲಿಸಿ ಬಿಜೆಪಿ ರಾಜ್ಯಾಧ್ಯಕ್ಷರ ಅನುಮತಿ ಮೇರೆಗೆ ವಿಪ್ ಜಾರಿ ಮಾಡಲಾಗಿತ್ತು
ಒಂದು ಭತ್ತದ ಹೊರೆಯ ಜೊತೆ ಒಂದು ಕಮಲ ವಿಡಿದ ಕೈ ಗೆ ನಗರಸಭೆ ಅಧಿಕಾರ ಭಾಗ್ಯ.!
ಆದರೆ ವಿಪ್ ಉಲ್ಲಂಘಿಸಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯ ಸೋಲಿಗೆ ಕಾರಣ ಆಗಿದ್ದಕ್ಕೆ ಇವರ ಸದಸ್ಯತ್ವ ರದ್ದು ಮಾಡಲು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪಕ್ಷಾಂತರ ನಿಷೇದ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು,
ಸುಧೀರ್ಘ ವಿಚಾರಣೆಯ ನಂತರ ಜಿಲ್ಲಾಧಿಕಾರಿಗಳು ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರ ಸದಸ್ಯತ್ವ ರದ್ದು ಪಡಿಸಿದ್ದಾರೆ,
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.