ಗಂಗಾವತಿ: ರೈಲು ಡಿಕ್ಕಿ ವ್ಯಕ್ತಿ ಸಾವು.!
ತುಂಗಾವಾಣಿ.
ಗಂಗಾವತಿ: ಡಿ-8 ನಗರದಲ್ಲಿ ಹಾದು ಹೋಗುವ ರೈಲ್ವೆ ಟ್ರ್ಯಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಬುಧವಾರ ಮುಂಜಾನೆ ವೇಳೆ ನಡೆದಿದೆ.
ಕೊಪ್ಪಳ ರಸ್ತೆಯಲ್ಲಿ ಬರುವ ಮಾಜಿ ಸಚಿವ ಅನ್ಸಾರಿಯವರ ಮನೆ ಹಿಂದುಗಡೆ ಬರುವ ರೈಲ್ವೆ ಟ್ರ್ಯಾಕ್ ಬಳಿ ದುರಂತ ಸಂಭವಿಸಿದ್ದು ಜಯನಗರದ ಗುಡ್ಡದ ಬಳಿ ನಿವಾಸಿ ಹುಲುಗಪ್ಪ ನಾಯಕ ಹತ್ತಿಮರದ (65) ಎಂಬ ರೈತ ತನ್ನ ಹೊಲದಲ್ಲಿ ಸಸಿಮಡಿ ಗದ್ದೆಗೆ ನೀರು ಹರಿಸಿ ತನ್ನ ಮನೆಗೆ ತೆರಳುವ ವೇಳೆ ಘಟನೆ ಸಂಭವಿಸಿದೆ. ಸ್ಥಳಿಯರು ಹೇಳುವ ಪ್ರಕಾರ ವೃದ್ದನಿಗೆ ಕಿವಿ ಕೇಳದಿರುವ ಕಾರಣ ರೈಲು ಬರುವ ಶಬ್ದ ಕೇಳಿಲ್ಲ ಎಂದು ತಿಳಿದು ಬಂದಿದೆ.
ಪರಿಹಾರಕ್ಕೆ ಒತ್ತಾಯ.
ನಗರದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ ಬಡ ರೈತನ ಕುಟುಂಬಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕರು ಸಂಸದರು ಸೂಕ್ತ ಪರಿಹಾರ ಕೊಡಿಸಿ ಎಂದು ಒತ್ತಾಯಿಸಿದರು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ