Breaking News

ಭರ್ಜರಿ ಭೇಟೆ! ಜೂಜುಕೋರರ ಬಂಧನ.

ಭರ್ಜರಿ ಭೇಟೆ! ಜೂಜುಕೋರರ ಬಂಧನ.

ತುಂಗಾವಾಣಿ
ಗಂಗಾವತಿ ನ 28 ಗಂಗಾವತಿ ತಾಲೂಕಿನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪಿಐ ಉದಯರವಿ ನೇತೃತ್ವದ ತಂಡ ದಾಳಿಮಾಡಿ ಐವರು ಜೂಜುಕೋರರನ್ನು ಬಂಧಿಸಿ ಸುಮಾರು (ಒಂದು ಲಕ್ಷ ಇಪ್ಪತ್ತು ಸಾವಿರ ರೂ) ₹1.20.000/- ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.

ನಿನ್ನೆ (ಶನಿವಾರ) ರಾತ್ರಿ 9 ಗಂಟೆ ಸುಮಾರಿಗೆ ಆನೆಗುಂದಿ ಭಾಗದಲ್ಲಿ ಬರುವ ಕೊರಮ್ಮ ಕ್ಯಾಂಪ್‌ನ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಇಸ್ಪೀಟ್ ಆಟದಲ್ಲಿ ತೊಡಗಿದ್ದ ರಮೇಶ ತಂದೆ ಹನಮಂತಪ್ಪ ಡಂಬರ ಬೂದುಗುಂಪ. ಬಿಎಮ್ ಶಶಿಕುಮಾರ ತಂದೆ ಸತ್ಯನಾರಾಯಣ ಶೆಟ್ಟಿ ಶಿರಗುಪ್ಪ. ವಿನೋದ ತಂದೆ ಪಂಪನಗೌಡ ಯರಡೋಣ. ಶರಣಪ್ಪ ತಂದೆ ಮರಿಸ್ವಾಮಿ ಶೆಟ್ಟಿ ಬರಗೂರು. ಹಾಗು ಹನುಮಂತ ಭಜಂತ್ರಿ ಬರಗೂರು. ಎಂಬುವವರನ್ನು ಜೂಜಿನ ಹಣ ಹಾಗು ಜೂಜಾಟಕ್ಕೆ ಬಳಸಿದ್ದ ಸಾಮಾಗ್ರಿಗಳು ಹಾಗು ಪಣಕಿಟ್ಟಿದ್ದ ಹಣದ ಜೊತೆ ಬಂಧಿಸಿ ಠಾಣೆಗೆ ಕರೆತಂದು ಜಾಮೀನಿನ ಮೇಲೆ ಬಿಡುಗಡೆ ಮಾಡಿ ತನಿಖೆ ಕೈಗೊಂಡಿದ್ದಾರೆ.
ಪಕ್ಕದ ಜಿಲ್ಲೆಗಳಿಂದ ಬರುವ ಜೂಜುಕೋರರು ಗಂಗಾವತಿ ತಾಲೂಕಿಗೆ ಜೂಜಾಟ ಆಡಲು ಬರುವ ಹಿಂದೆ ಸ್ಥಳೀಯ ಜೂಜಾಟ ಆಡಿಸುವವರ ಕೈವಾಡವಿರಬಹುದು, ಲಕ್ಷಾಂತರ ರೂಪಾಯಿಗಳನ್ನು ಪಣಕ್ಕಿಟ್ಟು ಜೂಜಾಟ ಆಡುವವರ ಹಿಂದೆ ಯಾರಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ವೃತ್ತದ ನಾಮಫಲಕ ವಿವಾದ. ನಗರದಲ್ಲಿ ಮೂರು‌ದಿನ ನಿಷೇದಾಜ್ಞೆ ಜಾರಿ.

ವೃತ್ತದ ನಾಮಫಲಕ ವಿವಾದ. ನಗರದಲ್ಲಿ ಮೂರು‌ದಿನ ನಿಷೇದಾಜ್ಞೆ ಜಾರಿ. ತುಂಗಾವಾಣಿ ಗಂಗಾವತಿ ಡಿ 16 ನಗರದ ವೃತ್ತವೊಂದರ ನಾಮಫಲಕ ಅಳವಡಿಕೆ …

error: Content is protected !!