ಗಂಗಾವತಿ: ಮಾರಕಾಸ್ತ್ರದಿಂದ ಇರಿತ ಗಾಯಾಳು ಆಸ್ಪತ್ರೆಗೆ ದಾಖಲು.
ತುಂಗಾವಾಣಿ
ಗಂಗಾವತಿ ಫೆ 23 ಜಗಳವಾಡುತ್ತಿದ್ದವರನ್ನು ಬಿಡಿಸಲು ಹೋದ ಯುವಕನಿಗೆ ರಕ್ತಸ್ರಾವ ಆಗುವ ರೀತಿಯಲ್ಲಿ ಹಲ್ಲೆ ಮಾಡಿದ ಘಟನೆ ಗಂಗಾವತಿ ನಗರದ ಮುರಾಹರಿನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ 10-30 ರ ಸುಮಾರಿಗೆ ಗುಂಡಮ್ಮ ಕ್ಯಾಂಪಿನ ಸಚಿನ್ ಹಾಗು ಶಿವಕುಮಾರ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿಯಾಗಿ ಕೈ ಕೈ ಮಿಲಾಯಿಸಿಕೊಂಡು ಜಗಳವಾಡುತ್ತಿದ್ದರು ಅದನ್ನು ಕಂಡ ಅದೇ ಓಣಿಯ ಶಾಹಿದ್ ಎಂಬ ಯುವಕ ಪ್ರಶ್ನಿಸಿ ಜಗಳವಾಡುತ್ತಿದ್ದ ಇಬ್ಬರನ್ನೂ ಬಿಡಿಸಲು ಹೋಗಿದ್ದಾನೆ. ಆದರೆ ಶಾಹಿದ್ ಜಗಳದಲ್ಲಿ ಮಧ್ಯ ಪ್ರವೇಶಿಸಿ ಪ್ರಶ್ನಿಸಿದಕ್ಕೆ ಕುಪಿತಗೊಂಡ ಶಿವಕುಮಾರ ಅಲಿಯಾಸ್ ಗಡಿಗಿ ಕುಮಾರ ಅಲ್ಲೆ ಬಿದ್ದಿದ್ದ ಮಾರಕಾಸ್ತ್ರದಿಂದ ಸಾಹಿದ್ ಬೆನ್ನಿನ ಬಲಭಾಗಕ್ಕೆ ಇರಿದಿದ್ದಾನೆ, ತೀರ್ವತರದ ರಕ್ತಸ್ರಾವ ಕಂಡ ಸ್ಥಳೀಯರು ಗಾಯಾಳು ಶಾಹಿದ್ ನನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಣ್ಣಪುಟ್ಟ ಜಗಳಗಳಲ್ಲಿ ಚಾಕು ಹಿರಿತ, ಮಾರಾಣಾಂತಿಕ ಹಲ್ಲೆಯಾಗುತ್ತಿರುವುದು ಕಂಡರೆ ನಗರದ ಯುವಕರಲ್ಲಿ ಪೊಲೀಸರ ಭಯ ಇಲ್ಲದಂತೆ ಕಂಡುಬರುತ್ತಿದೆ, ನಗರದ ಓಣಿಓಣಿಗಳಲ್ಲಿ ಪುಡಿ ರಾಜಕಾರಣಿಗಳು ಹುಟ್ಟಿಕೊಂಡು ಹಿರಿರಾಜಕಾರಣಿಗಳ ಹತ್ತಿರ ತಮ್ಮ ಬೇಳೆ ಬೇಯಿಸಿಕೊಳ್ಳಲು ಯುವಕರ ಗುಂಪುಕಟ್ಟಿಕೊಂಡು ಹುರಿದುಂಬಿಸುತ್ತಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿವೆ ಎಂದು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಕಳೆದ ವಾರ ಕೊಪ್ಪಳ ರಸ್ತೆಯ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಬಡಿಗೆಗಳು ಹಾಗು ಚಾಕುವಿನಿಂದ ಇಬ್ಬರ ಮೇಲೆ ಮಾರಾಣಾಂತಿಕ ಹಲ್ಲೆಯಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಬಸ್ ನಿಲ್ದಾಣದ ಹತ್ತಿರವಿರುವ ಖಾಸಗಿ ಹೊಟೆಲ್ ಒಂದರಲ್ಲಿ ಒಬ್ಬ ಯುವಕ ಮಧ್ಯ ಸೇವಿಸಿ ಮಚ್ಚು ಹಿಡಿದು ಓಡಾಡಿ ಆತಂಕ ಹುಟ್ಟಿಸಿದ್ದ, ಆದರೆ ಅಲ್ಲಿ ಇದ್ದ ಜನ ಮಚ್ಚು ಕಸಿದುಕೊಂಡು ಬುದ್ದಿ ಹೇಳಿ ಕಳಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಆಗಿದ್ದು ಆತಂಕ ಸೃಷ್ಟಿಸಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.