ಗಂಗಾವತಿ: ಖಾಕಿ ಬಲೆಗೆ ಬಿದ್ದ ಡೆಡ್ಲಿ ಗ್ಯಾಂಗ್.!
ಖೆಡ್ಡಾಕೆ ಬಿದ್ದಿದ್ದೇ ರೋಚಕ.!
ತುಂಗಾವಾಣಿ
ಕೊಪ್ಪಳ ಫೆ 23 ದಿ ಫೆ 18 ರಂದು ರಾತ್ರಿ ಬಾರ್ ಒಂದರಲ್ಲಿ ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂದಿಸಿದಂತೆ 12 ಜನ ಆರೋಪಿತರನ್ನು ಸೆದೆಬಡಿಯುವಲ್ಲಿ ಗಂಗಾವತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಲ್ಲೆ ಖೋರರನ್ನು ಹಿಡಿಯಲು ಪೋಲಿಸರು ರೋಚಕ ಕಾರ್ಯಾಚರಣೆ ಮಾಡಿದ್ದು ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ ಹಾಗು ಗೋವಾ ರಾಜ್ಯದೆಲ್ಲೆಡೆ ಪರೀಶೀಲನೆ ಮಾಡಿ ಬಳ್ಳಾರಿಯಲ್ಲಿ ಹಲ್ಲೆ ಖೋರರ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಮತ್ತು ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಹಿಡಿದಿದ್ದಾರೆ.
ಹಲ್ಲೆ ಮಾಡಿದ ರಾತ್ರಿಯೆ ಪೊಲೀಸರ ಕಣ್ಣು ತಪ್ಪಸಿ ನಾಲ್ಕಾರು ದ್ವೀಚಕ್ರ ವಾಹನಗಳಲ್ಲಿ ಬಳ್ಳಾರಿಗೆ ಓಡಿಹೋಗಿದ್ದು ಅಲ್ಲಿಂದ ರೇಲ್ವೇ ಮೂಲಕ ಮೋಜು ಮಸ್ತಿಗೆ ಹೆಸರಾದ ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡಿ ರೆಸಾರ್ಟ್ ಗಳಲ್ಲಿ ತೆಲೆಮರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.! ಖಚಿತ ಮಾಹಿತಿ ಪಡೆದ ಪೊಲೀಸರು ಗೊವಾಕ್ಕೆ ತೆರಳಿ ಪರಿಶೀಲನೆ ಮಾಡುತ್ತಿರುವುದು ಮನಗಂಡ ಆರೋಪಿಗಳು ಮತ್ತೆ ರೈಲು ಪ್ರಯಾಣದ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ, ಮಫ್ತಿ ಡ್ರೆಸ್ಸಿನಲ್ಲಿದ್ದ ಪೋಲಿಸರು ಆರೋಪಿತರಾದ ಚಟಾಟಿ ಮಂಜ, ಹುಸೇನಿ, ಭರತ್, ಸಚಿನ್, ಹರ್ಷ (16) ವಾಂಟೆಡ್ ಮಂಜ, ಸಮೀರ್, ರಾಘವೇಂದ್ರ, ರಾಮ ಅಲಿಯಾಸ್ ಕೊಂಡರಾಮ, ಪ್ರಜ್ವಲ್, ಕಾರ್ತಿಕ್, ರನ್ನು ಬಂಧಿಸಿದ್ದಾರೆ.
ಆರೋಪಿತರಲ್ಲಿ ಹೆಚ್ಚಾಗಿ ನಿರುದ್ಯೋಗಿ ಯುವಕರಾಗಿದ್ದು ಇಂತಹ ದೃಷ್ಟ ಕಾರ್ಯಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವವರು ಯಾರು ? ಅವರ ಹಿಂದೆ ಬೆಂಬಲವಾಗಿ ನೀರೆರೆದು ಪೋಷಿಸುತ್ತಿರುವವರು ಯಾರು ? ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಾಗಿದೆ.
ಕಳೆದ ವರ್ಷದ ಗಣೇಶ ಹಬ್ಬದ ಸಂದರ್ಭದಲ್ಲಿ ಚಟಾಟಿ ಮಂಜನ ಗ್ಯಾಂಗ್ ನಗರದ ಎಪಿಎಮ್‌ಸಿ ಯಾರ್ಡ್ ನಲ್ಲಿ ಬೀಯರ್ ಬಾಟಲ್ ಗಳಿಂದ ಮೂವರು ಯುವಕರ ಮೇಲೆ ಅಟ್ಯಾಕ್ ಮಾಡಿ ಓಡಿಹೋಗಿ ತೆಲೆಮರೆಸಿಕೊಂಡಿದ್ದರು, ಐದಾರು ತಿಂಗಳು ತೆಲೆಮರಿಸಿಕೊಂಡಿದ್ದ ರೌಡಿ ಗ್ಯಾಂಗ್ ಪಡೆ ಮತ್ತೆ ತಮ್ಮ ಅಟ್ಟಹಾಸ ಮೆರೆಯಲು ತಮ್ಮ ಹಳೆ ಚಾಳಿಯಂತೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿ ಓಡಿಹೋಗಿದ್ದು ಈಗ ಪೊಲೀಸರ ಬಲೆಗೆ ಬಿದ್ದು ಮುದ್ದೆ ಮುರಿಯುತ್ತಿದ್ದಾರೆ.!
ಶ್ಲಾಘನೆ
ಕೊಪ್ಪಳ ಎಸ್‌ಪಿ ಗಿರಿ ಮಾರ್ಗದರ್ಶನದಲ್ಲಿ ಗಂಗಾವತಿ ಡಿಎಸ್‌ಪಿ ಉಜ್ಜಿನಕೊಪ್ಪ ನೇತೃತ್ವದ ವಿಶೇಷ ತಂಡ ರಚಿಸಿ ಗಂಗಾವತಿ ಠಾಣೆ ಪಿಐ ವೆಂಕಟಸ್ವಾಮಿ, ಕೊಪ್ಪಳ ಮಹಿಳಾ ಪೋಲಿಸ್ ಠಾಣೆಯ ಪಿಐ ಚಂದಪ್ಪ ಚಿಕ್ಕೋಡಿ ಒಳಗೊಂಡ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಹೇಶ, ಗ್ಯಾನಪ್ಪ, ಮರಿಶಾಂತವೀರಗೌಡ, ಚಿರಂಜೀವಿ, ಮೈಲಾರಪ್ಪ, ರಮೇಶ್, ಅಯ್ಯನಗೌಡ, ಮುತ್ತುರಾಜ್, ಮುಂತಾದವರು ಇದ್ದರು, ಶೀಘ್ರವಾಗಿ ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ತಂಡಕ್ಕೆ ಕೊಪ್ಪಳ ಎಸ್ಪಿ ಶ್ಲಾಘಿಸಿದ್ದು ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.