ಕೊಪ್ಪಳ: ಕಾಡಾ ಅಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು.
ತುಂಗಾವಾಣಿ
ಕೊಪ್ಪಳ: ಫೆ-15 ದಿ: ಫೆ 12 ರಂದು ಕಾರಟಗಿ ಪಟ್ಟಣದಲ್ಲಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಹಾಗು ಜಾತಿನಿಂದನೆ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಇಂದು ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮತ್ತು ಪರಮೇಶ್ವರಗೌಡ ಬೂದುಗುಂಪಾ ಮೇಲೆ ಜಾತಿ ನಿಂದನೆ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ ತಾಲೂಕಿನ ತಹಶಿಲ್ದಾರ ಮೇಲೆ ಹಲ್ಲೆ ಮಾಡಿರುವ ಆರೋಪಿತರನ್ನು ಬಂದಿಸುವಂತೆ ಒತ್ತಾಯಿಸಿ ವೀರಶೈವ ಲಿಂಗಾಯತ ಒಕ್ಕೂಟ ತಾಲೂಕ ಘಟಕದಿಂದ ಕಾರಟಗಿ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗಿತ್ತು ಆ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಿಪ್ಪೇರುದ್ರಸ್ವಾಮಿ ದಲಿತರನ್ನು ನಾಯಿಗಳಿಗೆ ಹೋಲಿಸಿ ಮಾತನಾಡಿದ್ದಲ್ಲದೇ ವೀರಶೈವ ಯುವಕರು ರಾಕೆಟ್ ಇದ್ದಂತೆ ಅವರು ಮನಸ್ಸು ಮಾಡಿದರೆ ಕೀಳು ಸಮಾಜದವರನ್ನು ಮುಗಿಸಿಬಿಡುತ್ತಾರೆ ಎಂದು ಭಾಷಣ ಮಾಡಿ ಸಮಾಜಗಳ ನಡುವೆ ದ್ವೇಷ ಬಾವನೆ ಮೂಡುವಂತೆ ಮಾಡಿದ್ದಾರೆ ಮತ್ತು ಲಿಂಗಾಯತ ಸಮಾಜದ ಮುಖಂಡ ಪರಮೇಶ್ವರಗೌಡ ಬೂದುಗುಂಪಾ ದಲಿತರು ಕೇವಲ ನೂರೈತ್ತು ಜನ ಇದ್ದು ನಾವು ನಾಲ್ಕು ಸಾವಿರದಷ್ಟಿದ್ದೇವೆ ನಿಮ್ಮನ್ನು ಹೇಗೆ ಕಡಿಯಬೇಕು ಎಂದು ಜೀವಬೆದರಿಕೆ ಹಾಕಿ ಮಾತನಾಡಿದ್ದಾರೆ ಎಂದು ಹನುಮಂತ ತಂದೆ ಶಿವಪ್ಪ ನೀಡಿದ ದೂರನ್ನು ಪರಿಗಣಿಸಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.