ಬೇಜಾವಾಬ್ದಾರಿಯಿಂದ ವರ್ತಿಸಿದ ಅಗ್ನಿಶಾಮಕ ಸಿಬ್ಬಂದಿ.!
ತುಂಗಾವಾಣಿ.
ಗಂಗಾವತಿ:ಅ-14 ನಗರದ ಆರಾಧ್ಯ ದೈವ ಶ್ರೀ ಚನ್ನಬಸವ ಸ್ವಾಮಿ ದೇವಾಲಯದ ಬಳಿ ಅರ್ಧ ಘಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ.
ಗಂಗಾವತಿ ನಗರದ ಪ್ರಮುಖ ವೃತ್ತ ಗಾಂಧಿ ವೃತ್ತ. ಗಾಂಧಿ ಸರ್ಕಲ್ ದಿಂದ ಜುಲಾಯಿನಗರಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು ಹಬ್ಬದ ಮಾರುಕಟ್ಟೆಗೆ ಬಂದವರು ಇದೇ ರಸ್ತೆಯಲ್ಲೆ ಸಂಚರಿಸುವುದು ಕಾಮನ್. ಆದರೆ ಗಂಗಾವತಿ ನಗರದ ಅಗ್ನಿಶಾಮಕ ದಳದ ಸಿಬ್ಬಂದಿ ಬೇಜವಾಬ್ದಾರಿ ತನ ಪ್ರದರ್ಶನ ಮಾಡಿದ್ದು ಸಾರ್ವಜನಿಕರ ಹಿಡಿ ಶಾಪ ಹಾಕಿದ್ದು ಕಂಡು ಬಂತು. ಅಷ್ಟಕ್ಕೂ ಅಗ್ನಿಶಾಮಕ ದಳದ ಸಿಬ್ಬಂದಿ ಮಾಡಿದ್ದಾದರೂ ಏನು ಅಂತಿರಾ.?
ವಾಹನ ಪೂಜೆಗಾಗಿ ರಸ್ತೆಯನ್ನೆ ಬಂದ್ ಮಾಡಿ ವಾಹನ ಸವಾರರ ಜೊತೆಗೆ ವಾಗ್ವಾದ ನಡೆಸಿ ಅರ್ಧ ಘಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಿ ಬೇಜಾವಾಬ್ದಾರಿಯಾಗಿ ನಡೆದುಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.