ಕ್ರೂರಿ ಕರೊನಾಗೆ ಇಂದು ಇಬ್ಬರು ಬಲಿ.!
ಗಂಗಾವತಿ ಶಾಸಕ ಗುಣಮುಖ.!
ತುಂಗಾವಾಣಿ.
ಕೊಪ್ಪಳ:ಜುಲೈ,31ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಜಿಟಿವ್ ಸೊಂಕಿತರ ಸಂಖ್ಯೆ ಏರುತ್ತಿದೆ, ಅದರ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೆ ಇದೆ, ಇಂದು ಕ್ರೂರಿ ಹೆಮ್ಮಾರಿ ವೈರಸ್ ಗೆ ಇಬ್ಬರು ಸಾವನ್ನಪ್ಪಿದ್ದಾರೆ,
ಯಲಬುರ್ಗಾ ತಾಲ್ಲೂಕಿನ ಆಡೂರು ಗ್ರಾಮದ 62 ವರ್ಷದ ವ್ಯಕ್ತಿಗೆ ಸೊಂಕು ದೃಢಪಟ್ಟಿತ್ತು ಅವರನ್ನು ನಿಗದಿತ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುತ್ತಾರೆ,
ಇನ್ನೊಬ್ಬ 62 ವರ್ಷದ ವ್ಯಕ್ತಿಯೂ ಸಹ ಮೃತಪಟ್ಟಿರುತ್ತಾರೆ, ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನವರು ಎಂದು ಹೇಳಲಾಗುತ್ತಿದೆ, ಇಬ್ಬರ ಸಾವಿನೊಂದಿಗೆ ಸಾವಿನ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ,
ಸರ್ಕಾರದ ಕೊವಿಡ್-19 ನಿಯಮದ ಪ್ರಕಾರ ಅವರ ಅಂತ್ಯ ಸಂಸ್ಕಾರ ಮಾಡಲಾಗುವುದು,ಎಂದು ಜಿಲ್ಲಾಡಳಿತ ತಿಳಿಸಿದೆ.
ಗಂಗಾವತಿ ಶಾಸಕ ಮನವಳ್ಳಿ ಚೇತರಿಕೆ,
ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಯವರಿಗೆ ಇದೆ ತಿಂಗಳು ಜು,19 ರಂದು ಸೊಂಕು ದೃಢಪಟ್ಟಿತ್ತು, ಹೋಮ್ ಐಸೋಲೆಷನ್ ನಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲಾಗಿತ್ತು, ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ನಾನು ಸಂಪೂರ್ಣ ಗುಣಮುಖರಾಗಿರುವುದುದಾಗಿ ತಿಳಿಸಿ ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ಜನ, ಹಿತೈಷಿಗಳು ಅಭಿಮಾನಿಗಳು ಇನ್ನೂ ಅನೇಕರು ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ಪೂಜೆ ಪುನಸ್ಕಾರ ಪ್ರಾರ್ಥನೆ ಸಲ್ಲಿಸಿದ್ದರು ಅವರೆಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು, ನಂತರ ಕರೊನಾ ವೈರಸ್ ದೊಡ್ಡ ಪ್ರಮಾಣದ ರೋಗವಲ್ಲ ಅದರಿಂದ ಹೆದರುವ ಅವಶ್ಯಕತೆ ಇಲ್ಲ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಧೈರ್ಯದಿಂದ ಎದುರಿಸಿ ಎಂದು ಕರೆ ಕೊಟ್ಟರು,
ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.